ನೇಸರ ಫೆ07:ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಮತ್ತು ನಿಶಿಪೂರ್ಣ ಭಜನೆ ಕಾರ್ಯಕ್ರಮವು ಉಚ್ಚಿಲ ಬ್ರಹ್ಮಶ್ರೀ ಕೆ.ಯು.ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.7ರಿಂದ ಪ್ರಾರಂಭಗೊಂಡು ಫೆ.9ರವರೆಗೆ ನಡೆಯಲಿದೆ.
ಫೆ.7ರಂದು ಸಂಜೆಯಿಂದ ಚಿದ್ಗಲ್, ಬೈಲು, ಮಾಲಾಜೆ, ಪುತ್ತಿಲ-ಬೈಲಡ್ಕ, ಬಿಳಿನೆಲೆ, ಸಣ್ಣಾರ, ಪರ್ಲ, ಮದೆಪರ್ಲ, ಬಳಿಕ ಚೇರು, ಎರ್ಮಾಯಿಲ್, ನಡ್ತೋಟ, ಭಾಗ್ಯ, ಕಳಿಗೆ, ಪಳ್ಳಿಗದ್ದೆ, ಗೋಪಾಳಿ, ಕೈಕಂಬ, ಕೋಟೆಬಾಗಿಲು, ಒಳಬೈಲು, ಗುಂಡಿಗದ್ದೆ, ಹೊಸೋಕ್ಲು, ಕುಕ್ಕಾಜೆ, ಬ್ರಾಂತಿಕೊಚ್ಚಿ ಭಾಗದವರಿಂದ, ಉಡೇವು, ಸೂಡ್ಲು, ಒಗ್ಗು, ತಿಮ್ಮಡ್ಕ, ಮೇರೊಂಜಿ, ವಾಲ್ತಾಜೆ, ನೆಟ್ಟಣ, ಚೆಂಡೆಹಿತ್ಲು ಭಾಗದವರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಬಳಿಕ ನಿಶಿಪೂರ್ಣ ಭಜನಾ ಕಾರ್ಯಕ್ರಮವು ಫೆ.8ರ ಮುಂಜಾನೆಯವರೆಗೆ ನಡೆಯಲಿದೆ.
ಫೆ.8ರ ಸಂಜೆ ಸಾಮೂಹಿಕ ಪ್ರಾರ್ಥನೆ, ಪ್ರಸಾದ ಶುದ್ಧಿ, ವಾಸ್ತು ಬಲಿ, ವಾಸ್ತು ರಕ್ಷೆಘ್ನ, ದೀಪಾರಾಧನೆ, ಸಂಧ್ಯಾವಂದನೆ ನಡೆಯಲಿದೆ.ಫೆ.9ರಂದು ಬೆಳಿಗ್ಗೆ ಗಣಪತಿ ಹವನ, ಕಲಶ ಪೂಜೆ, ಮಧ್ಯಾಹ್ನ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೀಪಾರಾಧನೆ, ಸಂಧ್ಯಾವಂದನೆ, ಬಳಿಕ ವಿದ್ವಾನ್ ಮುರಳಿಕೃಷ್ಣ ಕಾವು ಪಟ್ಟಾಜೆಯವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ.
ರಾತ್ರಿ ಮಹಾಪೂಜೆ ಬಳಿಕ ರಾಜಾಂಗಣದಲ್ಲಿ ಶ್ರೀ ದೇವರ ಬಲಿ ನೃತ್ಯೋತ್ಸವ, ಬಟ್ಟಲು ಕಾಣಿಕೆ, ಮಹಾಪ್ರಸಾದ, ಮಹಾಮಂತ್ರಾಕ್ಷತೆ ನಡೆಯಲಿದೆ. ರಾತ್ರಿ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಲಿದೆ .
GOOGLE MAP