ನೆಲ್ಯಾಡಿ: ಕರಸೇವಕರಿಗೆ ಗೌರವಾರ್ಪಣೆ

ಶೇರ್ ಮಾಡಿ

ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ – ಕೌಕ್ರಾಡಿ ಯಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಪ್ರಾಣ ಪ್ರತಿಷ್ಠೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಕರಸೇವೆಯಲ್ಲಿ ಭಾಗವಹಿಸಿದಂತಹ ಕರಸೇವಕರಾದ ಕೃಷ್ಣಪ್ಪ ಕಟ್ಟೆ ಮಜಲು, ಕುಶಾಲಪ್ಪ ಪೂವಾಜೆ, ಸುದರ್ಶನ್ ಕುಡ್ತಾಜೆ ಇವರಿಗೆ ನೆಲ್ಯಾಡಿ ಹಿಂದೂ ಜಾಗರಣ ವೇದಿಕೆ ಹಾಗೂ ಉಪವಸತಿ ಬೂತ್ ಪ್ರಮುಖ್ ವತಿಯಿಂದ ಗೌರವಿಸಲಾಯಿತು.

ನೆಲ್ಯಾಡಿ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮೋಹನ್ ಕಟ್ಟೆಮಜಲು, ದೇವಸ್ಥಾನದ ಅಧ್ಯಕ್ಷರಾದ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ಸುಧೀರ್, ಕೋಶಾಧಿಕಾರಿ ವಿನೋದ್, ಉಪನ್ಯಾಸಕರಾದ ವಿಶ್ವನಾಥ್ ಶೆಟ್ಟಿ, ರಮೇಶ್ ಬಾಣಜಾರ್, ರವಿಪ್ರಸಾದ್ ಸುರಕ್ಷಾ, ದಯಾನಂದ ವಾಣಿಶ್ರೀ ರವಿಪ್ರಸಾದ್ ಶೆಟ್ಟಿ, ರವಿಚಂದ್ರ ಹೊಸವಕ್ಲು, ಬಾಲಕೃಷ್ಣ ಗೌಡ ತೋಟ, ಉಮೇಶ್ ಪೂಜಾರಿ ಪೊಸವಳಿಕೆ, ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ ನೂಜಿನ್ನಾಯ ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!