ಕಡಬ: ತಾಲೂಕಿನ ಕೊೈಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರೀ ರಾಮ ಮಂದಿರ ಲೋಕರ್ಪಣೆ ಪ್ರಯುಕ್ತ ಬೆಳಿಗ್ಗೆ ಭಜನೆ, ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ನೇತೃತ್ವದಲ್ಲಿ ನಾಗತಂಬಿಲ ಬಳಿಕ ಅಯೋದ್ಯೆಯ ನೇರ ಪ್ರಸಾರದ ಪ್ರದರ್ಶನ ನಡೆಯಿತು.
ಈ ಸಂದರ್ಬ ಪ್ರಗತಿಪರ ಕೃಷಿಕ ಉದಯ ಕಶ್ಯಪ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮದ ಅಯೋಧ್ಯಾ ಕರಸೇವಕರಾದ ಯದುಶ್ರೀ ಆನೆಗುಂಡಿ, ಮಾದವ ಆನೆಗುಂಡಿ ಅವರನ್ನು ಸನ್ಮಾನಿಸಲಾಯಿತು. ಶಿಲಾ ಪೂಜಾನದ ಸೇವಾಕರ್ತರಿಗೆ ಗೌರವಾರ್ಪಣೆ ನಡೆಯಿತು. ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ ಉಪಸ್ಥಿತರಿದ್ದರು. ಭವಾನಿಶಂಕರ ಪರಂಗಾಜೆ ಸ್ವಾಗತಿಸಿದರು. ಸಚಿನ್ ಪಟ್ಟೆ ವಂದಿಸಿದರು. ಸುದೀಶ್ ಪಟ್ಟೆ ನಿರೂಪಿಸಿದರು.