ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಶ್ರೀರಾಮತಾರಕ ಮಂತ್ರ ಯಜ್ಞ, ಭಜನೆ, ದೀಪೋತ್ಸವ

ಶೇರ್ ಮಾಡಿ

ದೇವರಿಗೆ ಬೆಳ್ಳಿಯ ದಾರಬಟ್ಟಲು ಸಮರ್ಪಣೆ

ಕೊಕ್ಕಡ: ಅಯೋಧ್ಯೆಯ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಜ.22ರಂದು ಬೆಳಗ್ಗೆ 7.00ರಿಂದ ಶ್ರೀರಾಮತಾರಕ ಮಂತ್ರ ಯಜ್ಞ, ಭಜನಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನೆರವೇರಿತು.

ಅಲ್ಲದೆ ಅಯೋಧ್ಯೆಯ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನೇರಪ್ರಸಾರವನ್ನು ಪರದೆಯ ಮೂಲಕ ವೀಕ್ಷಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸಂಜೆ ದೀಪೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬೆಂಗಳೂರಿನ ಭಕ್ತಾದಿಗಳೊಬ್ಬರು ದೇವರಿಗೆ ಬೆಳ್ಳಿಯ ದಾರಬಟ್ಟಲನ್ನು ಸಮರ್ಪಿಸಿದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ, ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ, ಸುಬ್ರಮಣ್ಯ ಉಪ್ಪರ್ಣ, ದೇವಸ್ಥಾನದ ಪ್ರಧಾನ ಅರ್ಚಕ ರಮಾನಂದ ಭಟ್ ಹಾಗೂ ಊರ ಭಕ್ತಾದಿಗಳು ಭಾಗವಹಿಸಿದ್ದರು.

Leave a Reply

error: Content is protected !!