ಭಾರತ ಸಂದರ್ಶನಕ್ಕೆ ಆಗಮಿಸಿದ ಕ್ರೈಸ್ತ ಸಭೆಯ ಜಗದ್ಗುರು ಪರಿಶುದ್ಧ ಮೊರಾನ್ ಮೊರ್ ಇಗ್ನಷಿಯಸ್ ಅಪ್ರೇಮ್-II ಪೆಟ್ರಿಯಾರ್ಕ್

ಶೇರ್ ಮಾಡಿ

ಸೀರಿಯನ್ ಒರತೋಡೋಕ್ಸ್ ಕ್ರೈಸ್ತ ಸಭೆಯ ಜಗದ್ಗುರು ಪರಿಶುದ್ಧ ಮೊರಾನ್ ಮೊರ್ ಇಗ್ನಷಿಯಸ್ ಅಪ್ರೇಮ್-II ಪೆಟ್ರಿಯಾರ್ಕ್ ರವರು ತಮ್ಮ ಸಭೆಯ ಭಕ್ತರ ಅಪೇಕ್ಷೆಯ ಮೇರೆಗೆ ಸಿರಿಯದಿಂದ ಮೂರು ವಾರಗಳ ಭಾರತ ಸಂದರ್ಶನಕ್ಕೆ ಇಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಸರಕಾರಿ ಗೌರವದೊಂದಿಗೆ ಮತ್ತು ಸಭೆಯ ಪರಮಪೂಜ್ಯ ಧರ್ಮಾಧ್ಯಕ್ಷರುಗಳು, ಧರ್ಮಗುರುಗಳು ಮತ್ತು ಸಭಾ ಮುಂದಾಳುಗಳು ಹೃದಯಸ್ಪರ್ಶಿ ಸ್ವಾಗತ ನೀಡಿ ಬರಮಾಡಿಕೊಂಡರು.

ಕರ್ನಾಟಕ ಹಾಗೂ ಕೇರಳದಲ್ಲಿರುವ ವಿವಿಧ ಚರ್ಚ್ ಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ.

ಎರಡು ದಿನದ ಬಳಿಕ ಮೈಸೂರು ನಗರದಲ್ಲಿ ನೂತನ ಇಗರ್ಜಿಯ ಪ್ರತೀಷ್ಟಾ ವಿಧಿ ನಡೆಸಿ ಕೇರಳದ ಮಲಬಾರ್, ವಯನಾಡು, ಮಿನಂಗಡಿ ಮೂಲಕ ಕ್ಯಾಲಿಕಟ್ ಧರ್ಮಪ್ರಾತ್ಯದ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ನಂತರ ತ್ರಿಚೂರ್ ಮೂಲಕ ಕೊಚ್ಚಿನ್ ತಲಪಿ ಸಿರಿಯನ್ ಸಭೆಯ ಅಖಿಲ ಭಾರತದ ಕಥೋಲಿಕೇಟ್ ನೆಲೆಗೊಂಡಿರುವ ಪುತ್ತನ್ ಕುರಿಶ್ ಆಸ್ಥಾನದಲ್ಲಿ ವಾಸಿಸುವರು.

ನೆಲ್ಯಾಡಿ, ರೆಂಜಿಲಾಡಿ ಇಚಿಲಂಪಾಡಿ, ಕುಂತೂರು, ಅಡ್ಡಹೊಳೆ, ಶಿಬಾಜೆ, ಕಕ್ಕಿಂಜೆ, ಬೆಳ್ವಾಯಿ ಮುಂತಾದ ಸಿರಿಯನ್ ಜಾಕೋಬೈಟ್ ಚರ್ಚ್ ಗಳ ಧರ್ಮಕ್ಷೇತ್ರವು ಆಲ್ವಾಯಿ ಸಮೀಪದ ಪೆರುಮ್ಪಾವೂರ್ ಪಟ್ಟಣದಲ್ಲಿರುವ ಇವಾoಜೇಲಿಸ್ಟಿಕ್ ಅಸೋಸಿಯೇಷನ್ ಒಫ್ ದ ಈಸ್ಟ್ ಸಂಸ್ಥೆಯ ಮೆಟ್ರೋಪೋಲೀಟನ್ ಹೌಸ್ ಆಗಿದೆ. ಇದರ ಈಗಿನ ಧರ್ಮಧ್ಯಕ್ಷರು ಪರಮ ಪೂಜ್ಯ ಬಿಷೋಪ್ ಮರ್ಕೊಸ್ ಮೊರ್ ಕ್ರಿಸೋಸ್ತೋಮಸ್ ಆಗಿರುತ್ತಾರೆ. 1924 ರಲ್ಲಿ ಆರಂಭವಾದ ಈ ಸಂಸ್ಥೆ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. ಇದರ ಆಶ್ರಯದಲ್ಲಿ 25ಕ್ಕೂ ಮೇಲ್ಪಟ್ಟು ದೇವಾಲಯಗಳು, ಶ್ರದ್ದಾ ಕೇಂದ್ರಗಳು, ವಿದ್ಯಾಕೇಂದ್ರಗಳು, ಅನಾಥಾಲಯಗಳು, ವೃದ್ದ ಸದನಗಳು ಕಾರ್ಯ ನಿರ್ವಹಿಸುತಿವೆ. ನೆಲ್ಲ್ಯಾಡಿಯ ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳು ಈ ಧರ್ಮಕ್ಷೆತ್ರಕ್ಕೋಳಪಟ್ಟಿದೆ.

ಶತಮಾನೋತ್ಸವ ವರ್ಷದ ಧಾರ್ಮಿಕ ಹಾಗೂ ಸಮಾಜಮುಖಿ ಸೇವಾಕಾರ್ಯಗಳ ಉದ್ಘಾಟನೆಯನ್ನು ಫೆಬ್ರವರಿ 6 ರಂದು ಪರಿಶುದ್ಧ ಪೆಟ್ರಿಯಾರ್ಕ್ ಜಗದ್ಗುರುಗಳ ಅಮೃತ ಹಸ್ತದಿಂದ ಅದ್ದೂರಿ ಸಮಾರಂಭದಲ್ಲಿ ನರವೇರಲಿದೆ. ಕ್ರಿಸ್ತ ಸಭೆಯ ಎಲ್ಲಾ ಧರ್ಮಧ್ಯಕ್ಷರುಗಳು, ಮಂತ್ರಿಗಳು, ಜನಪ್ರತಿನಿದಿನಗಳು, ಸಾಮಾಜಿಕ ಮುಖಂಡರಗಳು ಪಾಲ್ಗೊಳ್ಳಲಿದ್ದಾರೆ.

ಧರ್ಮಕ್ಷೇತ್ರದ ಅಭಿವೃದ್ಧಿಗಾಗಿ ಧೀರ್ಘಕಾಲ ಸೇವೆ ಸಲ್ಲಿಸಿದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವ ಸಲ್ಲಿಸಲಿದ್ದಾರೆ.

Leave a Reply

error: Content is protected !!