ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾಂಸ್ಕೃತಿಕ ಕಲರವ Talents day

ಶೇರ್ ಮಾಡಿ

ಆಲಂಕಾರು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಇಲ್ಲಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ಜ.27ರಂದು ಸಂಸ್ಥೆಯಲ್ಲಿ ಜರಗಿತು.

ಸ್ಪರ್ಧೆಗಳ ನಿರ್ಣಾಯಕರಾಗಿ ಖ್ಯಾತ ಯಕ್ಷಗಾನ ಕಲಾವಿದೆ ಶ್ರೇಯ ಆಲಂಕಾರು ಹಾಗೂ ಕುಣಿತ ಭಜನೆಗಳ ಮೂಲಕ ಸನಾತನ ಸಂಸ್ಕೃತಿಯ ಪ್ರಸರಣ ಮಾಡುತ್ತಿರುವ, ರಾಷ್ಟ್ರ ಸೇವಿಕ ಸಮಿತಿಯ ಕಡಬ ತಾಲೂಕು ಕಾರ್ಯವಾಹಿಕರಾದ ಶ್ರೀಮತಿ ಪೂರ್ಣಿಮಾ ಹಿರಿಂಜ ಭಾಗವಹಿಸಿದ್ದರು.

ಸುಮಾರು 64 ವಿದ್ಯಾರ್ಥಿಗಳ ಮೂರು ತಂಡ ನೆರೆದಿದ್ದವರಿಗೆ ವೈವಿಧ್ಯಮಯ ಕಾರ್ಯಕ್ರಮಗಳ ಭರಪೂರ ಮನೋರಂಜನೆ ನೀಡಿತು. ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರು, ಸಂಸ್ಥೆಯ ಮುಖ್ಯಗುರುಗಳು, ಕನ್ನಡ ಮಾಧ್ಯಮ ವಿಭಾಗದ ಮುಖ್ಯಗುರುಗಳು, ಶಿಕ್ಷಕ -ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

error: Content is protected !!