ಕುಕ್ಕೇಡಿ ಪಟಾಕಿ ಸ್ಫೋಟ ಪ್ರಕರಣ ಸ್ಥಳ ಮತ್ತು ಹಾನಿ ಗೋಳಗಾದ ಮನೆಗಳಿಗೆ ಬೆಳ್ತಂಗಡಿ ಧರ್ಮಾಧ್ಯಕ್ಷರ ಬೇಟಿ

ಶೇರ್ ಮಾಡಿ

ಬೆಳ್ತಂಗಡಿ: ಜ.28ರಂದು ಕುಕ್ಕೇಡಿ ಪಟಾಕಿ ಸ್ಫೋಟ ನಡೆದ ಸ್ಥಳಕ್ಕೆ ಬೆಳ್ತಂಗಡಿ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಅವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸ್ಫೋಟದಿಂದ ಪೂರ್ಣ ಮತ್ತು ಅಂಶಿಕವಾಗಿ ಹಾನಿಗೋಳಗಾದ ಮನೆಗಳನ್ನು ಸಂದರ್ಶಸಿ ಮನೆಯವರಿಂದ ಘಟನೆಯ ನೇರ ಚಿತ್ರಣವನ್ನು ಪಡೆದರು.
ಸಾಮಾನ್ಯವಾಗಿ ಆ ಸಮಯದಲ್ಲಿ ಮನೆಯಲ್ಲಿ ಇರುವವರು ಪವಾಡ ಸದ್ರಶ್ಯವಾಗಿ ಅಂದು ಮನೆಯಲ್ಲಿ ಇಲ್ಲದ ಕಾರಣ ಜೀವಾಪಾಯದಿಂದ ಪಾರಾದರು ಎಂದು ಮನೆಯವರು ವಿವರಿಸಿದರು. ಒಂದು ಮನೆ ಸಂಪೂರ್ಣ ಹಾಗೂ ಇನ್ನೆರಡು ಮನೆಗಳು ಅಂಶಿಕವಾಗಿ ಹಾನಿಯಾಗಿದ್ದು ಸೂಕ್ತ ತನಿಖೆ ಮತ್ತು ಹಾನಿಗೋಳಗಾದವರಿಗೆ ಸೂಕ್ತ ಪರಿಹಾರ ಕ್ಕೆ ಬೆಳ್ತಂಗಡಿ ಧರ್ಮಾಧ್ಯಕ್ಷರ ಆಗ್ರಹಿಸಿದರು. ಧರ್ಮ ಪ್ರಾಂತ್ಯದ ವಿಕಾರ್ ಜೆನರಲ್ ಅತಿ ವಂದನಿಯ ಜೋಸ್ ವಲಿಯಪರಂಭಿಲ್, ಬೆಳ್ತಂಗಡಿ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಫೋರೋನ ಅಧ್ಯಕ್ಷರಾದ ರೆಜಿ ಜಾರ್ಜ್ ಪಡಂಗಡಿ ಹಾಗೂ ಬಿಜು, ಬೆಳ್ತಂಗಡಿ ವೇಣೂರು ಧರ್ಮಕೇಂದ್ರದ ಸದಸ್ಯರು ಧರ್ಮಾಧ್ಯಕ್ಷರ ಜೊತೆಯಲ್ಲಿ ಇದ್ದರು.

ವೆಂಕಪ್ಪ ಮೂಲ್ಯ, ಲೈಸ್ಸಿ ಚೆರಾಡಿ ಹಾಗೂ ಹಾನಿಗೋಳಗಾದ ಜೋಸೆಫ್ ಮಾತ್ಯು ಇವರ ಮನೆಗಳಿಗೆ ಭೇಟಿ ನೀಡಿ ಸಂತಯಿಸಿದರು

Leave a Reply

error: Content is protected !!