ಬಸ್‌ ಢಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವು

ಶೇರ್ ಮಾಡಿ

ಲಾೖಲದಿಂದ ಕಾಜೂರಿಗೆ ಸಾಗುವ ರಸ್ತೆಯ ಮಂಜೊಟ್ಟಿ ಸಮೀಪ ರವಿವಾರ ಬಸ್‌ ಢಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದಾರೆ.

ಮಂಜೊಟ್ಟಿ ಸಮೀಪದ ಪರಾರಿ ನಿವಾಸಿ ಉಮೇಶ್‌ ಪೂಜಾರಿ ಅವರ ಪುತ್ರ ಧರಣೇಂದ್ರ ಪೂಜಾರಿ (24) ಮೃತ ಯುವಕ.

ಬೆಳ್ತಂಗಡಿ ಕಡೆಯಿಂದ ತನ್ನ ಮನೆ ಮಂಜೊಟ್ಟಿಗೆ ಮಧ್ಯಾಹ್ನ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಬೆಳ್ತಂಗಡಿ ಕಡೆಗೆ ಅತೀ ವೇಗದಲ್ಲಿ ಬಂದ ಖಾಸಗಿ ಬಸ್‌ ಢಿಕ್ಕಿ ಹೊಡೆಯಿತು. ಸವಾರ ಬಸ್ಸಿನಡಿ ಸಿಲುಕಿದ್ದು ಸ್ಥಳೀಯರು ಹರಸಾಹಸ ಪಟ್ಟು ಹೊರತೆಗೆದು ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡುವ ಮಾರ್ಗದ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಧರಣೇಂದ್ರ ಪೂಜಾರಿ ಅವರ ತಂದೆ ಅಂಗವಿಕಲರಾಗಿದ್ದು ಕುಟುಂಬದ ಜೀವನ ನಿರ್ವಹಣೆ ಇವರ ದುಡಿಮೆಯಲ್ಲೇ ಸಾಗುತ್ತಿತ್ತು ಎನ್ನಲಾಗಿದೆ. ಬೆಳ್ತಂಗಡಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!