ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರಣ್ಯ ಮತ್ತು ಪರಿಸರ ಸಚಿವ ಭೇಟಿ; ಧರ್ಮಸ್ಥಳ ಪ್ಲಾಸ್ಟಿಕ್ ಮುಕ್ತ ಅಧಿಕೃತ ಘೋಷಣೆ

ಶೇರ್ ಮಾಡಿ

ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಕುಟುಂಬ ಸಮೇತರಾಗಿ ಇಂದು (ಫೆ.5) ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ‌ ಮಂಜುನಾಥ ಸ್ವಾಮಿ‌ ದರ್ಶನ‌ ಪಡೆದರು.

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಮುಂದೆ ಕೈಗೊಳ್ಳುವ ಅಭಿವೃದ್ಧಿ ‌ಸಹಿತ‌ ಇತರ ವಿಚಾರದ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಗೌಡ, ದಯಾನಂದ ಬೆಳಾಲು ಹಾಗೂ ಪಕ್ಷದ ಪ್ರಮುಖರು ಜತೆಗಿದ್ದರು.

ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ ಶೆಟ್ಟಿ, ದೇವಳ ಕಚೇರಿ ವ್ಯವಸ್ಥಾಪಕ ಪಾರ್ಶ್ವನಾಥ ಜೈನ್ ಸಚಿವರನ್ನು ಕ್ಷೇತ್ರದ ವತಿಯಿಂದ ಸ್ವಾಗತಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳವು ಈಗಾಗಲೇ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಿ ಘೋಷಣೆಯಾಗಿದ್ದು, ಸಚಿವರ ಸಮ್ಮುಖದಲ್ಲಿ ಅಧಿಕೃತ ಘೋಷಣೆ ನಡೆಯಿತು.

ಮಂಗಳೂರು ವೃತ್ತ ಸಿಎಫ್ಒ ವಿ.ಕರಿಕಳನ್, ಕೆ.ಎಸ್.ಡಿ.ಸಿ ಕಮಲಾ ಕರಿಕಳನ್, ಡಿಎಫ್ಒ ಅಂಥೋನಿ ಎಸ್ ಮರಿಯಪ್ಪ, ಎಸಿಎಫ್ ಶ್ರೀಧರ್, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಮತ್ತು ಅರಣ್ಯ ಇಲಾಖೆ ಸಿಬಂದಿ, ಪತ್ನಿ ಗೀತಾ ಖಂಡ್ರೆ, ಪುತ್ರರಾದ ಸಾಗರ್ ಖಂಡ್ರೆ, ಗುರು ಖಂಡ್ರೆ ಜತೆಗಿದ್ದರು.

Leave a Reply

error: Content is protected !!