ಶಿಕ್ಷಕಿಯಿಂದ ಹಿಂದೂ ಧರ್ಮದ ಅವಹೇಳನ ಆರೋಪ; ಹಿಂದೂ ಕಾರ್ಯಕರ್ತರಿಂದ ತರಾಟೆ

ಶೇರ್ ಮಾಡಿ

ಮಂಗಳೂರು ನಗರದ ಖಾಸಗಿ ಶಾಲೆಯೊಂದರ ಶಿಕ್ಷಕಿ ತರಗತಿಯಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಶನಿವಾರ ಕೆಲವು ವಿದ್ಯಾರ್ಥಿಗಳ ಹೆತ್ತವರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಲೆಗೆ ತೆರಳಿ ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ವಾಗ್ವಾದ ನಡೆದಿದೆ. ಶಿಕ್ಷಕಿಯ ಬಗ್ಗೆ ವಿದ್ಯಾರ್ಥಿಯೋರ್ವರ ತಾಯಿ ಹೇಳಿರುವ ಮಾತುಗಳು ವೈರಲ್ ಆಗಿದ್ದು, ಈ ಬಗ್ಗೆ ಡಿಡಿಪಿಐ‌ಗೆ ದೂರು ನೀಡಲಾಗಿದೆ.

Leave a Reply

error: Content is protected !!