ಸೌತಡ್ಕ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಆರಂಭ

ಶೇರ್ ಮಾಡಿ

ಕೊಕ್ಕಡ: ಇಲ್ಲಿನ ಸೌತಡ್ಕದಲ್ಲಿ ಫೆ.11 ರಂದು ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಅರಸನಮಕ್ಕಿ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ.ಎಸ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಅರಸಿನಮಕ್ಕಿ ಶಕ್ತಿಕೇಂದ್ರದ ಪ್ರಮುಖ್ ಗಣೇಶ್.ಕೆ ಹೊಸತೋಟ, ಹತ್ಯಡ್ಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮುರಳಿಧರ ಶೆಟ್ಟಿಗಾರ್, ಅರಸಿನಮಕ್ಕಿ ಗ್ರಾಮ ಪಂಚಾಯಿತಿನ ಸದಸ್ಯ ಪ್ರೇಮಚಂದ್ರ, ಸುಂದರ ರಾಣ್ಯ ಮೊದಲಾದವರು ಉಪಸ್ಥಿತರಿದ್ದರು.

ಜೀವ ವಿಮಾ ವಿಭಾಗದ ಅಭಿವೃದ್ಧಿ ಅಧಿಕಾರಿ ಉದಯ ಶಂಕರ ಸ್ವಾಗತಿಸಿ. ಸಂಸ್ಥೆಯ ಮಾಲಕ ಕೃಷ್ಣಪ್ಪ ಗೌಡ ಪಡಾಯಬೆಟ್ಟು ವಂದಿಸಿದರು.

Leave a Reply

error: Content is protected !!