ವಿವಿಧ ಘಟಕಗಳ ಸದಸ್ಯರ ಕುಟುಂಬ ಸಮ್ಮಿಲನ ಹಾಗೂ ವಿವಿಧ ಸಮಾಜಮೂಖಿ ಕೊಡುಗೆಗಳ ಉದ್ಘಾಟನೆ
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲಿಜನ್ ಗೆ ಪೂರ್ವ ರಾಷ್ಟೀಯ ಅಧ್ಯಕ್ಷರ ಭೇಟಿ, ವಿವಿಧ ಘಟಕಗಳ ಸದಸ್ಯರ ಕುಟುಂಬ ಸಮ್ಮಿಲನ ಹಾಗೂ ವಿವಿಧ ಸಮಾಜಮೂಖಿ ಕೊಡುಗೆಗಳ ಉದ್ಘಾಟನೆ ಕಾರ್ಯಕ್ರಮ ನೆಲ್ಯಾಡಿಯಲ್ಲಿ ಫೆ.13ರಂದು ನಡೆಯಿತು.
ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ ಕಲ್ಲಿನ ಸ್ವಾಗತ ಫಲಕ ಉದ್ಘಾಟನೆ, ಬಲ್ಯದ ಕೆರೆನಡ್ಕ ಬಾಬು ಪೂಜಾರಿಯವರ ವಿಕಲಚೇತನ ಮಗಳು ಕು.ಲಾವಣ್ಯಳಿಗೆ ವೀಲ್ ಚೇರ್ ಕೊಡುಗೆ. ಬಲ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 122 ಲೈಬ್ರರಿಗೆ ಪುಸ್ತಕಗಳನ್ನು ಹಾಗೂ ಮಕ್ಕಳ ಬಟ್ಟಲು ಇಡುವ ಸ್ಟ್ಯಾಂಡ್ ನ್ನು ಕೊಡುಗೆ, ಗೊಳಿತೊಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ ನೀಡಲಾಯಿತು. ನೆಲ್ಯಾಡಿಯ ಕೊಲ್ಯೊಟ್ಟು ನದಿಯ ಹತ್ತಿರ ನೆಲ್ಯಾಡಿ ಪಂಚಾಯತ್ ಸಹಕಾರದೊಂದಿಗೆ ಸೀನಿಯರ್ ಚೇಂಬರ್ ವತಿಯಿಂದ ಸ್ವಚ್ಛತೆಯ ಅರಿವನ್ನು ಮೂಡಿಸುವ ಸೂಚನ ಫಲಕವನ್ನುಅಳವಡಿಸಲಾಯಿತು. ಹೊಸಮಜಲಿನಿಂದ ನೆಲ್ಯಾಡಿಯವರೆಗೆ ಬೃಹತ್ ವಾಹನ ಜಾಥ ನಡೆಸಲಾಯಿತು.

ಬಳಿಕ ಸಂತ ಜಾರ್ಜ್ ವಿದ್ಯಾ ಸಂಸ್ಥೆ ನೆಲ್ಯಾಡಿಯ ಮಿಲಿನಿಯಂ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು, ಸಭಾಧ್ಯಕ್ಷತೆಯನ್ನು ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲೀಜನ್ ಅಧ್ಯಕ್ಷ ನಾರಾಯಣ ಎನ್ ಬಲ್ಯ ಕೊಲ್ಲಿಮಾರು. ಪೂರ್ವ ರಾಷ್ಟೀಯ ಅಧ್ಯಕ್ಷರಾದ ಡಾ.ಅರವಿಂದ ರಾವ್ ಕೆದಿಗೆ, ರಾಷ್ಟೀಯ ಉಪಾಧ್ಯಕ್ಷರಾದ ಜಿ.ಕೆ ಹರಿಪ್ರಸಾದ್ ರೈ, ರಾಷ್ಟೀಯ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕರಾದ ಚಿತ್ರಕುಮಾರ್, ರಾಷ್ಟೀಯ ಸಮುದಾಯ ಅಭಿವೃದ್ಧಿ ವಿಭಾಗದ ಸಯೋಜಕರಾದ ಡಾ.ಸದಾನಂದ ಕುಂದರ್, ಸೀನಿಯರ್ ಚೇಂಬರ್ ನೆಲ್ಯಾಡಿಯ ಸ್ಥಾಪಕ ಅಧ್ಯಕ್ಷರಾದ ಅಬ್ರಹಾಂ ವರ್ಗಿಸ್ ರವರು ಅತಿಥಿಗಳಾಗಿ ಭಾಗವಹಿಸಿದ್ದರು. ಯೋಜನಾ ನಿರ್ದೇಶಕ ರವಿಚಂದ್ರ ಗೌಡ ಹೊಸವಕ್ಲು, ಸೀನಿಯರೇಟ್ ಅಧ್ಯಕ್ಷ ಪುಷ್ಪ ನಾರಾಯಣ ಬಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಓರ್ವ ಬಡ ಮಹಿಳೆಗೆ ಟೈಲರಿಂಗ್ ಮಷೀನ್ ನ್ನು ಕೊಡುಗೆಯಾಗಿ ನೀಡಲಾಯಿತು. 2PPF ನ್ನು ನೂತನವಾಗಿ ಆರಂಭಗೊಂಡ ಪುತ್ತೂರು ಲೀಜನ್ ನ ಸದಸ್ಯರ ಪಟ್ಟಿಯನ್ನು ರಾಷ್ಟೀಯ ಅಧಿಕಾರಿಗೆ ನೀಡಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳನ್ನು ವಿಶೇಷವಾಗಿ ಗೌರವಿಸಲಾಯಿತು, ಲೀಜನ್ ನ 4ನೇ ಆವೃತ್ತಿಯ ಪತ್ರಿಕೆ ಅಭಿನಂದನಾ ವನ್ನು ಬಿಡುಗಡೆಗೊಳಿಸಲಾಯಿತು.
ಕಡಬ, ಸುಬ್ರಹ್ಮಣ್ಯ, ಕಾರ್ಕಳ, ಮಂಗಳೂರು, ಪುತ್ತೂರು, ಬೆಳ್ತಂಗಡಿ ಸೀನಿಯರ್ ಚೇಂಬರ್ ಲೀಜನ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ರಾಷ್ಟೀಯ ಅಧಿಕಾರಿಗಳಾದ ಕಿಶೋರ್ ಫೆರ್ನಾಂಡಿಸ್, ಪ್ರಮೋದ್ ಬೆಳ್ತಂಗಡಿ ಭಾಗವಹಿಸಿದ್ದರು