ಒಂದೇ ದಿನ ಮೂರು ಬೈಕ್‌ ಕಳವು; ಪ್ರಕರಣ ದಾಖಲು

ಶೇರ್ ಮಾಡಿ

ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಮೂರು ಬೈಕ್‌ಗಳು ಕಳ್ಳತನವಾದ ಘಟನೆ ನಡೆದಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫೆ.14ರಂದು ರಾತ್ರಿಯ ವೇಳೆ ಮೂರೂ ಬೈಕ್‌ಗಳು ಕಳ್ಳತನವಾಗಿವೆ. ಧರ್ಮಸ್ಥಳ ಗ್ರಾಮದ ಮಲ್ಲರ್ಮ ಮಾಡಿ ನಿವಾಸಿ ಬೇಬಿ ಅವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ ಅನ್ನು ರಾತ್ರಿಯ ವೇಳೆ ಕಳ್ಳರು ಅಪಹರಿಸಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ನಾಪತ್ತೆಯಾಗಿತ್ತು.

ಮತ್ತೊಂದು ಪ್ರಕರಣದಲ್ಲಿ ಸುಳ್ಯ ತಾಲೂಕಿನ ಅಖಿಲೇಶ್ ಪೊಲೀಸರಿಗೆ ದೂರು ನೀಡಿದ್ದು ಧರ್ಮಸ್ಥಳ ಗ್ರಾಮದ ಗಡಿಯಲ್ಲಿರುವ ಕಲ್ಮಂಜ ಗ್ರಾಮದ ಮದ್ಮಲ್‌ ಕಟ್ಟೆ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದವರು ಮನೆಯ ಸಮೀಪ ಬೈಕ್‌ ಅನ್ನು ಫೆ.14ರಂದು ರಾತ್ರಿಯ ವೇಳೆ ನಿಲ್ಲಿಸಿದ್ದರು ಬೆಳಗ್ಗೆ ನೋಡಿದಾಗ ಬೈಕ್‌ ಕಳ್ಳತನವಾಗಿತ್ತು. ಬೈಕ್‌ನ ಅಂದಾಜು ಮೌಲ್ಯ ಸುಮಾರು 65,000 ರು. ಎಂದು ಅಂದಾಜಿಸಲಾಗಿದೆ.

ಮೂರನೆಯ ಪ್ರಕರಣದಲ್ಲಿ ಕೊಪ್ಪಳದಿಂದ ಧರ್ಮಸ್ಥಳಕ್ಕೆ ಬೈಕಿನಲ್ಲಿ ಯಾತ್ರಾರ್ಥಿಯಾಗಿ ಬಂದ ಬಸವರಾಜ್‌ ತಮ್ಮ ಬೈಕ್‌ ಅನ್ನು ಧರ್ಮಸ್ಥಳದ ಯೂನಿಯನ್‌ ಬ್ಯಾಂಕ್‌ ಎಟಿಎಂ ಬಳಿ ನಿಲ್ಲಿಸಿ ನಿದ್ದೆ ಮಾಡಿದ್ದರು ಬೆಳಗ್ಗೆ ನೋಡಿದಾಗ ಬೈಕ್‌ ಕಳ್ಳತನವಾಗಿತ್ತು.

ಈ ಮೂರೂ ಬೈಕ್‌ಗಳು ಒಂದೇ ದಿನ ಕಳ್ಳತನವಾಗಿದ್ದು ಒಂದೇ ತಂಡದ ಕೃತ್ಯ ಇರಬಹುದು ಎಂದು ಅನುಮಾನಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!