ಚಾರ್ಮಾಡಿಯಲ್ಲಿ ಕಾಳ್ಗಿಚ್ಚು

ಶೇರ್ ಮಾಡಿ

ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ಅರಣ್ಯ ಇಲಾಖೆ ವ್ಯಾಪ್ತಿಯ ಬಾರಿಮಲೆ ಎಸ್ಟೇಟ್‌ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಸ್ಥಳೀಯರು ಅರಣ್ಯ ಪ್ರದೇಶದಲ್ಲಿ ಒಣ ಹುಲ್ಲು ಹಾಗೂ ಗಿಡಗಂಟಿಗಳಿಗೆ ಹಚ್ಚಿರುವ ಬೆಂಕಿ ವ್ಯಾಪಿಸಿರುವ ಶಂಕೆ ವ್ಯಕ್ತವಾಗಿದೆ.

ಒಣ ಹುಲ್ಲನ್ನು ನಾಶ ಮಾಡುವ ಉದ್ದೇಶದಿಂದ ಹಚ್ಚುವ ಬೆಂಕಿ ಕಾಳ್ಗಿಚ್ಚಿಗೂ ಕಾರಣ ವಾಗುತ್ತದೆ. ಪ್ರಸ್ತುತ ಅರಣ್ಯದ ಅಂಚಿನವರೆಗೂ ಪಸರಿಸಿದ ಬೆಂಕಿಯನ್ನು ಆರಿಸಲಾಗಿದ್ದು ಯಾವುದೇ ಅಪಾಯದ ಸ್ಥಿತಿ ಇಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.

Leave a Reply

error: Content is protected !!