ಜೆಸಿಐ ನೆಲ್ಯಾಡಿಯಲ್ಲಿ ಸದಸ್ಯರಿಗೆ LDMT ತರಬೇತಿ

ಶೇರ್ ಮಾಡಿ

ನೆಲ್ಯಾಡಿ ಜೆಸಿಐ ತನ್ನ ಸದಸ್ಯರಿಗಾಗಿ ಲೋಕಲ್ ಆರ್ಗನೈಜೇಷನ್ ಡೆವಲಪ್ಮೆಂಟ್ ಟ್ರೈನಿಂಗ್ (ಎಲ್‌.ಡಿ.ಎಂ.ಟಿ) ತರಬೇತಿಯನ್ನು ಫೆ.21ರಂದು ಆಯೋಜಿಸಿತು.

ಜೆಸಿಐ ನೆಲ್ಯಾಡಿಯ ಪದಾಧಿಕಾರಿಗಳಿಗೆ ಜೆಸಿಯ ಅವಕಾಶಗಳು, ಆಂತರಿಕ ನಡಾವಳಿಗಳು ಮತ್ತು ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ತರಬೇತಿಯನ್ನು ಜೆಸಿಐನ ವಲಯ XV ರ ವಲಯ ಉಪಾಧ್ಯಕ್ಷರಾದ ಶಂಕರ್ ರಾವ್ ವಿಭಿನ್ನ ರೀತಿಯಲ್ಲಿ ನಡೆಸಿಕೊಟ್ಟರು.

ಜೆಸಿಐ ನೆಲ್ಯಾಡಿಯ ಅಧ್ಯಕ್ಷೆ ಸುಚಿತ್ರಾ. ಜೆ ಬಂಟ್ರಿಯಾಲ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಸಭಾ ವೇದಿಕೆಯಲ್ಲಿ ನಿಕಟ ಪೂರ್ವಾಧ್ಯಕ್ಷರಾದ ದಯಾಕರ ರೈ.ಕೆ.ಯಂ., ಮಹಿಳಾ ಜೇಸಿ ಅಧ್ಯಕ್ಷೆ ಲೀಲಾ ಮೋಹನ್, ಕಾರ್ಯದರ್ಶಿ ಆನಂದ ಅಜಿಲ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷರಾದ ರವೀಂದ್ರ.ಟಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.

ಜೇಸಿ ವಾಣಿಯನ್ನು ಘಟಕದ ಕೋಶಾಧಿಕಾರಿ ಸುಪ್ರೀತಾ ರವಿಚಂದ್ರ ಉದ್ಘೋಷಿಸಿದರು. ಘಟಕದ ಉಪಾಧ್ಯಕ್ಷೆ ರಶ್ಮಾ ರೈ ಎನ್ ವಲಯ ಉಪಾಧ್ಯಕ್ಷರ ಪರಿಚಯವನ್ನು ವಾಚಿಸಿದರು.

ಘಟಕದ ಪೂರ್ವಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಘಟಕದ ಕಾರ್ಯದರ್ಶಿ ಆನಂದ ಅಜಿಲ ಧನ್ಯವಾದವಿತ್ತರು.

Leave a Reply

error: Content is protected !!