ನೆಲ್ಯಾಡಿ ಗ್ರಾಮ ಆಡಳಿತ ಕಚೇರಿ ಕುಸಿತ

ಶೇರ್ ಮಾಡಿ

ನೆಲ್ಯಾಡಿ: ಅಪಾಯಕಾರಿ ಸ್ಥಿತಿಯಲ್ಲಿ ಇದ್ದ ಗೋಡೆ ಬಿರುಕು ಬಿಟ್ಟು ನೆಲ್ಯಾಡಿ ಗ್ರಾಮ ಆಡಳಿತ ಅಧಿಕಾರಿ ಕಚೇರಿ ಕಟ್ಟಡ ಕಳೆದ ರಾತ್ರಿ ಕುಸಿದು ಬಿದ್ದಿದೆ.

ಸುಮಾರು 50 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಕಟ್ಟಡ ಕುಸಿದು ಬೀಳುವ ಹಂತದಲ್ಲಿರುವ ಬಗ್ಗೆ ನೇಸರ ನ್ಯೂಸ್ ನಲ್ಲಿ ಮೂರು ದಿನದ ಹಿಂದೆ ವರದಿ ಪ್ರಕಟವಾಗಿತ್ತು. ಇಲ್ಲಿದ್ದ ದಾಖಲೆಗಳನ್ನು ಅಧಿಕಾರಿಗಳು ನೆಲ್ಯಾಡಿ ಗ್ರಾಮ ಪಂಚಾಯಿತಿನವರು ನೀಡಿದ ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದರು. ರಾತ್ರಿ ವೇಳೆ ಕಟ್ಟಡ ಕುಸಿದು ಬಿದ್ದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

Leave a Reply

error: Content is protected !!