ಉಜಿರೆ: ಇಲ್ಲಿನ ಎಸ್.ಡಿ.ಎಮ್ ಪದವಿ ಕಾಲೇಜಿನಲ್ಲಿ ಭೌತ ಶಾಸ್ತ್ರ,ಗಣಿತ ಶಾಸ್ತ್ರ ಮತ್ತು ಸಂಸ್ಕೃತ ವಿಭಾಗದ ಸಂಯೋಜನೆಯಲ್ಲಿ ಸೈನ್ಟಿಫಿಕ್ ಹೇರಿಟೇಜ್ ಆಫ್ ಇಂಡಿಯಾ ಎಂಬ ವಿಚಾರದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣ.
ಕಾರ್ಯಕ್ರಮವನ್ನು ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ .ಎಸ್ ಉದ್ಘಾಟಿಸಿ ಭಾರತೀಯ ಪುರಾತನ ಜ್ಞಾನ ಪದ್ಧತಿ ಇವತ್ತಿನ ಎಲ್ಲಾ ಆಧುನಿಕ ವಿಜ್ಞಾನ ಪದ್ಧತಿಗೆ ತಳಹದಿಯಾಗಿದೆ.ಇಂತಹ ವಿಚಾರ ಸಂಕೀರ್ಣಗಳಿಂದ ಇಂದಿನ ಯುವ ಜನತೆಗೆ ವಿಜ್ಞಾನಕ್ಕೆ ನಮ್ಮ ದೇಶದ ಕೊಡುಗೆಗಳ ಬಗ್ಗೆ ಅರಿವಾಗಲು ಸಹಾಯವಾಗುತ್ತದೆ ಹಾಗೂ ನಮ್ಮ ದೇಶದ ಜ್ಞಾನ ಸಂಪತ್ತಿನ ಬಗ್ಗೆ ತಿಳಿದುಕೊಳ್ಳಲು ನೇರವಾಗುತ್ತದೆ ಎಂದು ಶುಭ ಹಾರೈಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಎ.ಕುಮಾರ್ ಹೆಗ್ಡೆ ಮಾತನಾಡಿ ನಮ್ಮ ದೇಶದ ಪುರಾತನ ದೇವಸ್ಥಾನಗಳನ್ನು ನೋಡಿದರೆ ಗೊತ್ತಾಗುತ್ತದೆ ನಮ್ಮ ದೇಶದಲ್ಲಿ ಅದೆಂತ ಜ್ಞಾನ ಸಂಪತ್ತು ಇತ್ತು, ಅದೆಷ್ಟೋ ವರುಷಗಳ ಹಿಂದೆಯೇ ನಮ್ಮ ದೇಶ ವೈಜ್ಞಾನಿಕವಾಗಿ ಅದೆಷ್ಟು ವಿಚಾರವಂತವಾಗಿತ್ತು ಇಂತ ವಿಚಾರವನ್ನು ಮುಂದಿನ ಪೀಳಿಗೆಗೆ ತಿಳಿಸುವುದರಿಂದ ಇಂತಹ ವಿಚಾರ ಸಂಕೀರ್ಣಗಳು ಸಹಾಯವಾಗುತ್ತದೆ ಎಂದರು.
ವಿಚಾರ ಸಂಕೀರ್ಣದಲ್ಲಿ ನಮ್ಮ ದೇಶದ ವೈಜ್ಞಾನಿಕ ಪದ್ಧತಿ, ಆಚಾರ -ವಿಚಾರ ಗಳ ಹಿಂದೆ ಅಡಕವಾಗಿರುವ ವೈಜ್ಞಾನಿಕ ಮನೋಭಾವ ಇವುಗಳ ಬಗ್ಗೆ ತಮ್ಮ ವಿಚಾರಧಾರೆಯನ್ನು ಮಂಡಿಸಲು ಡಾ.ಮಹೇಶ್ ಕೆ ಐ.ಐ.ಟಿ ಖರಗಪುರ್ ಹಾಗೂ ಡಾ.ಆನಂದ ಕೆ ಗುರ್ಯೆ ಮುಂಬೈ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದಾರೆ.
ಸಮಾರಂಭದಲ್ಲಿ ಕಾಲೇಜಿನ ಉಪ ಪ್ರಾಚಾರ್ಯ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಏನ್ ಕಾಕತ್ಕಾರ್ ಸ್ವಾಗತಿಸಿ, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ಭಟ್ ವಂದಿಸಿದರು. ಸ್ನಾತಕೋತ್ತರ ಭೌತ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ರಾಘವೇಂದ್ರ ಎಸ್ ಹಾಗೂ ಪದವಿ ಕಾಲೇಜಿನ ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ನಮ್ರತಾ ಜೈನ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.