ಸುಬ್ರಹ್ಮಣ್ಯ: ಹಸುವನ್ನು ಕೊಂದ ಮೊಸಳೆ!

ಶೇರ್ ಮಾಡಿ

ಸುಬ್ರಹ್ಮಣ್ಯ: ಇಲ್ಲಿನ ಕುಮಾರಧಾರಾ ನದಿಯಲ್ಲಿ ದನದ ಮೃತದೇಹ ಪತ್ತೆಯಾಗಿದ್ದು, ಮೊಸಳೆ ಹಿಡಿದು ಕೊಂದಿರುವ ಶಂಕೆ ವ್ಯಕ್ತವಾಗಿದೆ.

ದನದ ಮೃತದೇಹವನ್ನು ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ನ ಸದಸ್ಯರು ನದಿಯಿಂದ ದಡಕ್ಕೆ ತಂದು ದಫನ ಮಾಡಿದರು. ಡಾ| ರವಿ ಕಕ್ಕೆಪದವು, ಕಾರ್ತಿಕ್‌ ದೇವರಗದ್ದೆ, ಗೋಪಾಲ್‌ ಎಣ್ಣೆ ಮಜಲ್‌, ಗ್ರಾ.ಪಂ.ನ ರಾಮಚಂದ್ರ, ಆನಂದ ಸಹಕರಿಸಿದರು. ಮೂರು ದಿನಗಳಿಂದ ದನದ ಮೃತದೇಹ ನದಿಯಲ್ಲಿ ತೇಲುತ್ತಿದ್ದು, ಈ ಬಗ್ಗೆ ಗ್ರಾ.ಪಂ.ಗೆ ಮಾಹಿತಿ ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

Leave a Reply

error: Content is protected !!