ರೆಖ್ಯಾ ಮಕ್ಕಳ ಕುಣಿತ ಭಜನಾ ಸಮಾವೇಶ

ಶೇರ್ ಮಾಡಿ

ಮಕ್ಕಳಲ್ಲಿ ಎಳವೆಯಲ್ಲೆ ಧಾರ್ಮಿಕ ಪ್ರಜ್ಞೆ ಮೂಡಲು ಭಜನೆ ಸಹಕಾರಿ. ಭಜನೆಯಿಂದ ಮಕ್ಕಳಲ್ಲಿ ಹೆಚ್ಚು ಧಾರ್ಮಿಕ ಜಾಗ್ರತಿ ಮೂಡುತ್ತದೆ. ಪುರಾಣ ಕಥೆಗಳ ಜಾಗ್ರತಿ ಹೆಚ್ಚುತ್ತದೆ. ಸಮಾಜದಲ್ಲಿ ಸಂಸ್ಕಾರ ಬಲವಾಗುತ್ತದೆ. ಎಂದು ಧರ್ಮಸ್ಥಳ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೆಶಕರಾದ ಜಯರಾಮ ನೆಲ್ಲಿತ್ತಾಯ ತಿಳಿಸಿದ್ದರು.

ಅವರು ಬೆಳ್ತಂಗಡಿ ತಾಲೂಕಿನ ರೆಖ್ಯಾ ಶ್ರೀ ಗುಡ್ರಾಮಲ್ಲೆಶ್ವರ ದೆವಾಲಯದಲ್ಲಿ ನಡೆದ‌ ಮಕ್ಕಳ ಕುಣಿತ ಭಜನಾ ಕಾರ್ಯಕ್ರಮದ ಸಮಾರೊಪದ ಉದ್ಘಾಟನೆ ಮಾಡಿ ಮಕ್ಕಳನ್ನು ಹರಸಿದ್ದರು.

ಕಾರ್ಯಕ್ರಮದಲ್ಲಿ ಸಂಘಟಕರಾದ ರೆಖ್ಯಾ ಶ್ರೀಧರ, ಗುರುಗಳಾದ ಹತ್ಯಡ್ಕ್ಕ ಕೃಷ್ಣಪ್ಪ, ದೇವಾಲಯ ಅರ್ಚಕರಾದ ತಿರುಮಲೆಶ ಭಟ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!