ನೆಲ್ಯಾಡಿ ಗ್ರಾಮದ ರಾಮನಗರ ಹೊಸಮನೆ ದಿ.ರಮೇಶ ಗೌಡರ ಉತ್ತರಕ್ರಿಯೆ ಮತ್ತು ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ ಹೊಸಮನೆಯಲ್ಲಿ ನಡೆಯಿತು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂಸ್ಮರಣ ನುಡಿಗಳನ್ನು ನುಡಿದ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಮಾತನಾಡಿ ಸಣ್ಣ ಪ್ರಾಯದಲ್ಲಿ ಆಕಸ್ಮಿಕ ಮರಣವನ್ನಪ್ಪಿದ ದಿವಂಗತ ರಮೇಶ ಗೌಡರವರು ಒಬ್ಬ ನಿಷ್ಠಾವಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಒಬ್ಬ ಅತ್ಯುತ್ತಮ ಜೀಪು ಚಾಲಕನಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಶ್ರೀರಾಮ ಶಿಕ್ಷಣ ಸಂಸ್ಥೆಯಲ್ಲಿ ಚಾಲಕರಾಗಿ ಸೇವೆಯನ್ನು ಸಲ್ಲಿಸಿದರು ಒಬ್ಬ ಶಿಸ್ತಿನ ವ್ಯಕ್ತಿಯಾಗಿ ಪ್ರಾಮಾಣಿಕವಾದ ದುಡಿಮೆಯಿಂದ ಜೀವನ ಸಾಗಿಸುತ್ತಿದ್ದರು ಅವರ ಅಕಾಲಿಕ ಮರಣ ಅವರ ಕುಟುಂಬವನ್ನು ದುಃಖದ ಮಡುವಿಗೆ ತಳ್ಳಿದೆ, ಆ ಕುಟುಂಬಕ್ಕೆ ದುಃಖವನ್ನು ಬರಿಸುವ ಶಕ್ತಿಯನ್ನು ಭಗವಂತ ಅನುಗ್ರಹಿಸಲಿ ರಮೇಶ ಗೌಡರ ಪವಿತ್ರವಾದ ಆತ್ಮ ಹರಿಪಾದಕ್ಕೆ ಸೇರಲಿ ಅವರ ಹೆಸರು ನಮ್ಮ ಊರಿನಲ್ಲಿ ಶಾಶ್ವತವಾಗಿ ಉಳಿಯಲಿ ಎಂಬುದಾಗಿ ಪ್ರಾರ್ಥಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಸಮುದಾಯದ ಹಿರಿಯರಾದ ಕಾನಮನೆ ಜನಾರ್ಧನ ಗೌಡ ಗುರಿಕಾರರಾದ ಮಕ್ಕಿಗದ್ದೆ, ಮೋಹನ್ ಗೌಡ ಜಾಲಮನೆ, ಕೊರಗಪ್ಪ ಗೌಡ ಅವರ ಕುಟುಂಬದ ಹಿರಿಯರು ಮತ್ತು ಸಾಮಾಜಿಕ ಗಣ್ಯರಾದ ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ರವಿಪ್ರಸಾದ್ ಶೆಟ್ಟಿ ರಾಮನಗರ ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಉದಯಕುಮಾರ್ ದೋಂತಿಲ್ಲ, ಶಾಸ್ತಾರೆಶ್ವರ ದೇವಸ್ಥಾನದ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು, ಶ್ರೀ ರಾಜನ್ ದೈವ ಸೇವಾ ಸಮಿತಿ ದೈವಗಿರಿ ಅಧ್ಯಕ್ಷ ಸತೀಶ್ ಚಂದ್ರ ಗೌಡ ಅತ್ರಿಜಾಲು, ಧಾರ್ಮಿಕ ಮುಖಂಡ ಧನಂಜಯ ಗೌಡ ಕೊಡಂಗೆ, ಶ್ರೀ ವಿನಾಯಕ ಭಜನಾ ಮಂಡಳಿ ರಾಮನಗರ ಅಧ್ಯಕ್ಷ ಚಂದ್ರಶೇಖರ ರೈ, ರಾಮನಗರ ವಿನಾಯಕ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಅಮ್ಮಿ ಗೌಡ ನಾಲ್ಗೊತ್ತು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮ್ಮಿ ಪೂಜಾರಿ ಬೊಮ್ಮಿದಡ್ಡ, ಪ್ರಗತಿಪರ ಕೃಷಿಕ ರಮೇಶ್ ಗೌಡ ನಾಳ್ಗೊತ್ತು, ಶಾಸ್ತರೇಶ್ವರ ದೇವಸ್ಥಾನದ ಕೋಶಾಧಿಕಾರಿ ಸೀತಾರಾಮ ಗೌಡ ಕಾನಮನೆ, ಗ್ರಾಮ ಅಭಿವೃದ್ಧಿ ಯೋಜನೆ ಪುತ್ತೂರು ಮತ್ತು ಕಡಬ ತಾಲೂಕಿನ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಲ, ನಾರಾಯಣ ಗೌಡ ಹಾರ್ಪಾಳ, ಸಂಜೀವ ಗೌಡ ಹಾರ್ಫಳ, ದಿನೇಶ್ ಗೌಡ ಕೌಕ್ರಾಡಿ ಹೊಸಮನೆ ರವಿಚಂದ್ರ ಗೌಡ ಅತ್ರಿಜಾಲು, ಪುಷ್ಪರಾಜ ಗೌಡ ಕೊಡಂಗೆ, ಶ್ರೀನಪ್ಪ ಗೌಡ ಬರೇಮೇಲು ಅನೇಕ ಗಣ್ಯರು ಕುಟುಂಬಸ್ಥರು ಭಾಗವಹಿಸಿದ್ದರು. ಉಮೇಶ ಗೌಡ ವಂದಿಸಿದರು.