ಕಾಡುಕೋಣವೊಂದು ರಿಕ್ಷಾ ಮೇಲೆ ದಾಳಿ; ಬಾಲಕನಿಗೆ ಗಾಯ

ಶೇರ್ ಮಾಡಿ

ಪುದುವೆಟ್ಟು : ಧರ್ಮಸ್ಥಳ-ಮುಂಡಾಜೆ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯ ಪುದುವೆಟ್ಟು ಗ್ರಾಮದ ದಡಪಿತ್ತಿಲು ಎಂಬಲ್ಲಿ ಮಾ.2 ರಂದು ರಾತ್ರಿ ಸುಮಾರು ಗಂಟೆ 8:30 ಗಂಟೆಗೆ ಧರ್ಮಸ್ಥಳದಿಂದ ಬೊಮ್ಮನಾರು ಕಡೆ ಹೋಗುತ್ತಿದ್ದ ಆಟೋ ರಿಕ್ಷಾ ಚಾಲಕರಾದ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ವಡೆಕ್ಕೆಲ್, ಬೊಲ್ಮನಾರು ನಿವಾಸಿ ಡೆನ್ನಿಸ್ (42) ಮತ್ತು ಮಗ ದಿಲ್ಸನ್(15) ಎಂಬವರು ಹೋಗುವಾಗ ಆಟೋ ರಿಕ್ಷಾದ ಮೇಲೆ ಕಾಡುಕೋಣವೊಂದು ದಾಳಿ ಮಾಡಿ ಪಲ್ಟಿ ಮಾಡಿ ಜಖಂ ಮಾಡಿದೆ.

ಈ ಘಟನೆ ವೇಳೆ ಆಟೋದಲ್ಲಿದ್ದ ದಿಲ್ಸನ್(15) ಎಂಬುವರಿಗೆ ತಲೆಗೆ ಗಾಯವಾಗಿದ್ದು ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಉಜಿರೆ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!