ಸಮವಸ್ತ್ರವಿವಾದ ಹಿನ್ನೆಲೆ ರಾಜ್ಯದ ಶಾಲೆ, ಕಾಲೇಜುಗಳಿಗೆ 3 ದಿನ ರಜೆ ಘೋಷಣೆ

ಶೇರ್ ಮಾಡಿ

1 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಎಂದಿನಂತೆ ಶಾಲೆ ನಡೆಯಲಿದೆ.

“ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ರಾಜ್ಯದ ಸಮಸ್ತ ಜನತೆಗೆ ಮನವಿ ಮಾಡುತ್ತೇನೆ’ – ಟ್ವೀಟ್‌ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ರವರು,

ನೇಸರ ಫೆ.8:ಕರ್ನಾಟಕದಲ್ಲಿ ಹೆಚ್ಚಾದ ಸಮವಸ್ತ್ರ ಸಮಸ್ಯೆಯ ಹಿನ್ನೆಲೆ, ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ರವರು ರಾಜ್ಯದ ಎಲ್ಲ ಪ್ರೌಢಶಾಲೆ, ಪಿಯು ಕಾಲೇಜುಗಳು ಹಾಗೂ ಡಿಪ್ಲೊಮ, ಪದವಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
ದಿನಾಂಕ 09-02-2022 ರಿಂದ 11-02-2022 ರವರೆಗೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಟ್ವೀಟ್‌ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ರವರು, “ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ರಾಜ್ಯದ ಸಮಸ್ತ ಜನತೆಗೆ ಮನವಿ ಮಾಡುತ್ತೇನೆ’ ಎಂದಿದ್ದಾರೆ.
ಕರ್ನಾಟಕದಲ್ಲಿ ಉಡುಪಿಯ ಒಂದು ಕಾಲೇಜಿನಲ್ಲಿ ಬುಗಿಲೆದ್ದ ಹಿಜಾಬ್‌ ಮತ್ತು ಸಮವಸ್ತ್ರ ಕಡ್ಡಾಯ ವಿವಾದವು ರಾಜ್ಯದಾದ್ಯಂತ ವ್ಯಾಪಿಸಿ, ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರಲು ಆರಂಭಿಸಿದ್ದರು. ಈ ಹಿನ್ನೆಲೆ ಹಿಜಾಬ್ v/s ಕೇಸರಿ ಶಾಲು ಸಮವಸ್ತ್ರ ಕಡ್ಡಾಯ ಪಾಲನೆಗೆ ತೊಡಕು ಎದುರಾಗಿತ್ತು. ಶಿವಮೊಗ್ಗ, ಇತರೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದಲೇ ಕಲ್ಲು ತೂರಾಟವು ಆರಂಭವಾಗಿತ್ತು. ಈ ಚಟುವಟಿಕೆಗಳನ್ನು ಗಮನಕ್ಕೆ ತೆಗೆದುಕೊಂಡ ರಾಜ್ಯ ಸರ್ಕಾರ ಮುಂದಿನ ಅನಾಹುತಗಳನ್ನು ತಪ್ಪಿಸಲು ರಾಜ್ಯದ ಎಲ್ಲ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳು, ಡಿಗ್ರಿ ಕಾಲೇಜುಗಳಿಗೆ 3 ದಿನಗಳ ಕಾಲ ರಜೆ ಘೋಷಣೆ ಮಾಡಿದೆ.
ಹೈಕೋರ್ಟ್‌ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಂತರ ತೀರ್ಪನ್ನು ಇಂದು ನಿರೀಕ್ಷಿಸಲಾಗಿತ್ತು. ಆದರೆ ವಿಚಾರಣೆ ಮುಂದೂಡಿದ ಕಾರಣ ತೀರ್ಪನ್ನು ನಾಳೆ ನಿರೀಕ್ಷಿಸಬಹುದು. ಶೈಕ್ಷಣಿಕ ಚಟುವಟಿಕೆಗಳ ಸಂಬಂಧಿಸಿದ ನಿರ್ಧಾರವನ್ನು
ಹೈಕೋರ್ಟ್‌ ತೀರ್ಪು ನಂತರ ತೆಗೆದುಕೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
1 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಎಂದಿನಂತೆ ಶಾಲೆ ನಡೆಯಲಿದೆ.

—ಜಾಹೀರಾತು—

Leave a Reply

error: Content is protected !!