ನೇಸರ ಫೆ.8:ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಅಂತಿಮ ವೇಳಾಪಟ್ಟಿಯನ್ನು ಇದೀಗ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಸದರಿ ದಿನಾಂಕಗಳಂದು ಎರಡನೇ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಬರೆಯಲು ಸಕಲ ಸಿದ್ಧತೆ ನಡೆಸಿ. ವೇಳಾಪಟ್ಟಿ ಡೀಟೇಲ್ಸ್ ಈ ಕೆಳಗಿನಂತಿದೆ.
ಇಲಾಖೆಯು ದಿನಾಂಕ 16-04-2022 ರಿಂದ 06-05-2022 ರ ವರೆಗೆ ನಡೆಸಲು ತೀರ್ಮಾನಿಸಿ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವಿಷಯವಾರು ವೇಳಾಪಟ್ಟಿಯನ್ನು ಈ ಕೆಳಗಿನಂತೆ ಚೆಕ್ ಮಾಡಬಹುದು.
2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪಠ್ಯಕ್ರಮದಲ್ಲಿ ಹಾಗೂ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದು ಅದರ ವಿವರಗಳನ್ನು ಸಹ ಈ ಹಿಂದೆಯೇ ಬಿಡುಗಡೆ ಮಾಡಿತ್ತು. ತಾತ್ಕಾಲಿಕ ವೇಳಾಪಟ್ಟಿಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ದಿನಾಂಕ 16-04-2022 ರಿಂದ 04-05-2022 ರವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಅಂತಿಮ ವೇಳಾಪಟ್ಟಿಯೂ ಹಿಂದಿನ ವೇಳಾಪಟ್ಟಿಯಂತೆಯೇ ಆರಂಭವಾಗಲಿದೆ. ಆದರೆ ಪರೀಕ್ಷೆ ಮೇ 6 ಕ್ಕೆ ಅಂತ್ಯಗೊಳ್ಳಲಿದೆ.
ಇಲಾಖೆಯೂ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ದಿನಾಂಕ 17-02-2022 ರಂದು ಆರಂಭಿಸಿ 25-03-2022 ರವರೆಗೆ ನಡೆಸಲು ದಿನಾಂಕ ನಿಗದಿಪಡಿಸಿದೆ.
ಕರ್ನಾಟಕ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಾರ್ಚ್ 14 ರಿಂದ 25, 2022 ರವರೆಗೆ ನಡೆಸಲಿದೆ.
ವಿಷಯ | ದಿನಾಂಕ |
ಗಣಿತಶಾಸ್ತ್ರ | 16-04-2022 |
ರಾಜ್ಯಶಾಸ್ತ್ರ | 18/04-2022 |
ಮಾಹಿತಿ ತಂತ್ರಜ್ಞಾನ | 19-04-2022 |
ಇತಿಹಾಸ | 20-04-2022 |
ಉರ್ದು ಮತ್ತು ಸಂಸ್ಕೃತ | 21-04-2022 |
ತರ್ಕಶಾಸ್ತ್ರ | 22-04-2022 |
ಕರ್ನಾಟಕ ಸಂಗೀತ | 23-04-2022 |
ಅರ್ಥಶಾಸ್ತ್ರ | 25-04-2022 |
ಹಿಂದಿ | 26-04-2022 |
ಕನ್ನಡ | 28-04-2022 |
ಸಮಾಜಶಾಸ್ತ್ರ | 30-04-2022 |
ಭೂಗೋಳಶಾಸ್ತ್ರ | 02-05-2022 |
ಇಂಗ್ಲಿಷ್ | 04-05-2022 |
ಐಚ್ಛಿಕ ಕನ್ನಡ | 06-05-2022 |
—ಜಾಹೀರಾತು—