ಶ್ರೀ ಕ್ಷೇತ್ರ ದೆಯ್ಯರ ಮಜಲು ದೈವಗಿರಿ ಬೊಣ್ಯಸಾಗು ನಲ್ಲಿ ಶ್ರೀ ರಾಜನ್ ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವ

ಶೇರ್ ಮಾಡಿ

ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಬೊಣ್ಯಸಾಗುನಲ್ಲಿ ಶ್ರೀ ಕ್ಷೇತ್ರ ದೆಯ್ಯರ ಮಜಲು ದೈವಗಿರಿ ಶ್ರೀ ರಾಜನ್ ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವ ಮಾ.12 ರಿಂದ ಮಾ.14 ರವರೆಗೆ ನಡೆಯಲಿದೆ.

ಮಾ.12ರ ಬೆಳಗ್ಗೆ 9.00ಕ್ಕೆ ಹೊರೆ ಕಾಣಿಕೆ ಸಮರ್ಪಣೆ, ಬೆಳಗ್ಗೆ ಗಂಟೆ 9:30ಕ್ಕೆ ಉಗ್ರಾಣ ಮುಹೂರ್ತ, ಸಂಜೆ ಗಂಟೆ 6.00ರಿಂದ ವೈದಿಕ ಕಾರ್ಯಕ್ರಮಗಳು, ಸಂಜೆ 7.00ರಿಂದ ಭಜನೆ, ರಾತ್ರಿ ಗಂಟೆ 9.00ಕ್ಕೆ ಅನ್ನಸಂತರ್ಪಣೆ.

ಮಾ.13ರಂದು ಬೆಳಗ್ಗೆ 6.00ಗಂಟೆಯಿಂದ ವೈದಿಕ ಕಾರ್ಯಕ್ರಮಗಳು, ಬೆಳಗ್ಗೆ ಗಂಟೆ 10.14ರಿಂದ ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ತಂತ್ರಿಗಳ ನೇತೃತ್ವದಲ್ಲಿ ಶ್ರೀ ರಾಜನ್ ದೈವ ಹಾಗೂ ಪರಿವಾರದ ದೈವಗಳ ಪ್ರತಿಷ್ಠಾ ಕಲಶಾಭಿಷೇಕ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಅನ್ನಪ್ರಸಾದ ವಿತರಣೆ, ಸಂಜೆ ಗಂಟೆ 5.00 ರಿಂದ ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ, ಶಿರಾಡಿ, ಬಚ್ಚನಾಯ್ಕ ಹಾಗೂ ಗುಳಿಗ ದೈವಗಳ ಭಂಡಾರ ಹಿಡಿದು ನೇಮೋತ್ಸವ, ರಾತ್ರಿ ಗಂಟೆ 8.00ರಿಂದ ಅನ್ನಸಂತರ್ಪಣೆ.

ಮಾರ್ಚ್ 14ರಂದು ನೇಮೋತ್ಸವ, ಮಧ್ಯಾಹ್ನ ಗಂಟೆ 1.00 ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದರು.

Leave a Reply

error: Content is protected !!