ಉಜಿರೆ: ಉಜಿರೆಯ ಹಳೇ ಪೇಟೆ ಬಳಿಯ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದು ವೇಶ್ಯಾವಾಟಿಕೆ ನಿರತರಾಗಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ ಮಾ.6ರಂದು ನಡೆದಿದೆ.
ಮಾ.6 ರಂದು ಉಜಿರೆ ಗ್ರಾಮದ ಹಳೆ ಪೇಟೆ ಬಳಿಯ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಿ.ಜಿ. ಸುಬ್ಬಾಪೂರ ಮಠ್ ರವರು ಠಾಣಾ ಸಿಬಂದಿಗಳೊಂದಿಗೆ, ಸದ್ರಿ ಸ್ಥಳಕ್ಕೆ ದಾಳಿ ನಡೆಸಿ, ವೇಶ್ಯಾವಾಟಿಕೆ ನಿರತರಾಗಿದ್ದ ಆರೋಪಿಗಳಾದ, ರೇಣುಕಾ ಪ್ರಸಾದ್, ಅರಳೇ ಪೇಟೆ, ತುಮಕೂರು, ರಾಜೇಶ್ ಮೋಹನ್ ನಾಯರ್ ನಿಟ್ಟೆ ಕಾರ್ಕಳ, ನಿತಿನ್ ಕುಮಾರ್, ನೂರಾಲ್ ಬೆಟ್ಟು ಕಾರ್ಕಳ ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು, ಸ್ಥಳದಲ್ಲಿದ್ದ ಪ್ರಕರಣದ ನೊಂದ ಮಹಿಳೆಯನ್ನು ಮಹಿಳಾ ಸಿಬ್ಬಂದಿಗಳ ಭದ್ರತೆಗೆ ಕೊಟ್ಟು, ಸದ್ರಿ ಆರೋಪಿಗಳ ವಿರುದ್ದ ಹಾಗೂ ದಾಳಿಯ ವೇಳೆ ಪರಾರಿಯಾದ ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 30/24 ಕಲಂ:3,4,5,5 (d) ITP ACT ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.