ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಸಾಧನೆ ಮಾಡಿದ ಇಚ್ಚಲಂಪಾಡಿಯ ಕುವರಿಯರು

ಶೇರ್ ಮಾಡಿ

ಕಡಬ ತಾಲೂಕಿನ ಇಚ್ಚಿಲಂಪಾಡಿ ಗ್ರಾಮದ ಬೆರ್ಬಳ್ಳಿ ಶ್ರೀಮತಿ ಸೌಮ್ಯ ಮನೋಹರ ಶೆಟ್ಟಿ ಮತ್ತು ಬಜಪೆ ಪೆರ್ಮುದೆ ಮಂಜೊಟ್ಟಿ ಬಾಳಿಕೆ ಮನೋಹರ ಶೆಟ್ಟಿ ಅವರ ಮಕ್ಕಳಾದ ಕು.ಸಾನ್ವಿ ಎಮ್ ಶೆಟ್ಟಿ ಮತ್ತು ಕು.ಮಾನ್ವಿ.ಎಂ ಶೆಟ್ಟಿ. ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಸಾಧನೆ ಮಾಡಿದ ಇಚ್ಚಲಂಪಾಡಿಯ ಕುವರಿಯರು

ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆ ಡೊಂಬಿವಿಲಿ ಮಹಾರಾಷ್ಟ್ರ ಇಲ್ಲಿ ಕಲಿಯುತ್ತಿರುವ ಈ ಇಬ್ಬರು ಕುವರಿಯರು ಯಕ್ಷಗಾನ, ಭರತನಾಟ್ಯ, ಸಂಗೀತ ಕ್ಷೇತ್ರಗಳಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿ ಮುಂಬೈ ಕನ್ನಡಿಗರ ಮನಸೂರೆಗೊಂಡಿದ್ದಾರೆ. ಇವರು ಯಕ್ಷಗಾನದ ನಾಟ್ಯ ತರಬೇತಿಯನ್ನು ನಾಟ್ಯ ಗುರುಗಳಾದ ಸದಾನಂದ ಶೆಟ್ಟಿ ಕಟೀಲು ಅವರಿಂದ ನೃತ್ಯ ತರಬೇತಿಯನ್ನು ಪಡೆದುಕೊಂಡಿರುತ್ತಾರೆ. ಭರತನಾಟ್ಯ ತರಬೇತಿಯನ್ನು ದೊಂಬಿವಿಲಿ ಗಂಧರ್ವ ನೃತ್ಯ ಶಾಲೆಯ ಶ್ರೀಮತಿ ಇಂದುಮತಿ ಅವರಿಂದ ನೃತ್ಯ ತರಬೇತಿಯನ್ನು ಪಡೆಯುತ್ತಿದ್ದಾರೆ, ಇದರೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಗುರುಗಳಾದ ತಾರಾ ರಮೇಶ್ ಬಳಿ ಅಭ್ಯಾಸ ಮಾಡಿರುತ್ತಾರೆ. ಯೋಗಭ್ಯಾಸವನ್ನು ನಿರಂತರ ಯೋಗ ತರಬೇತಿ ಕೇಂದ್ರ ಸುಳ್ಯ ತರಬೇತುದಾರರಾದ ಶರತ್ ಮರ್ಗಿಲಡ್ಕ ಅವರಿಂದ ತರಬೇತಿಯನ್ನು ಪಡೆದುಕೊಂಡಿರುತ್ತಾರೆ.

ಯಕ್ಷಗಾನದಲ್ಲಿ ಯಾವುದೇ ಪಾತ್ರವನ್ನು ನಿರ್ಭೀತಿಯಿಂದ ಲೀಲಾಜಾಲವಾಗಿ ಅಭಿನಯಿಸುವುದರ ಮೂಲಕ ಮುಂಬೈ ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರ ಪಾತ್ರಗಳು ದೇವೇಂದ್ರ, ಯಮ, ಹನುಮಂತ, ನಿರುತಿ, ಜಂಬವತಿ ಕಲ್ಯಾಣದ ಜಾಂಬವತಿ ಪಾತ್ರಗಳನ್ನು ಮಾಡಿ ಕಲಾಭಿಮಾನಿಗಳಿಂದ ಸೈ ಎನಿಸಿ ಕೊಂಡಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಮುಂಬೈ ಬಂಟರ ಸಂಘ ಕನ್ನಡ ಸಂಘ ಗೌರವಿಸಿ ಪ್ರೋತ್ಸಾಹವನ್ನು ನೀಡುತ್ತಿದೆ, ಅಲ್ಲದೆ ಶಿಕ್ಷಣದಲ್ಲೂ ಶೇಕಡ 90% ಅಂಕಗಳನ್ನು ಪಡೆದು ಸಾಧನೆ ಮಾಡುತ್ತಿದ್ದಾರೆ.

ಇವರ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಬೆಳಗಲಿ ಮತ್ತು ನಮ್ಮೂರಿಗೆ ಕೀರ್ತಿಯನ್ನು ತರಲಿ ಎಂಬುದೇ ಕಲಾಭಿಮಾನಿಗಳ ಅಪೇಕ್ಷೆ

Leave a Reply

error: Content is protected !!