ಜೆಸಿಐ ನೆಲ್ಯಾಡಿ ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಆಗಿ ನೆಲ್ಯಾಡಿ ಕೆ.ಜೆ ಜೋಸ್

ಶೇರ್ ಮಾಡಿ

ನೆಲ್ಯಾಡಿ: 39 ಬಾರಿ ರಕ್ತದಾನ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಿರುವ ಕೆ.ಜೆ.ಜೋಸ್ ಅವರ ಸಾಮಾಜಿಕ ಕಳಕಳಿಯ ಅನನ್ಯ ಸೇವೆಯನ್ನು ಗುರುತಿಸಿ ಜೆಸಿಐ ನೆಲ್ಯಾಡಿ “ಸಲ್ಯೂಟ್ ದಿ ಸೈಲೆಂಟ್ ಸ್ಟಾರ್” ಕಾರ್ಯಕ್ರಮದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

ಜೆಸಿಐ ನೆಲ್ಯಾಡಿಯ ಅಧ್ಯಕ್ಷೆ ಸುಚಿತ್ರಾ.ಜೆ ಬಂಟ್ರಿಯಾಲ್, ಪೂರ್ವಾಧ್ಯಕ್ಷರಾದ ದಯಾಕರ. ರೈ. ಕೆ.ಯಂ, ಮಹಿಳಾ ಜೇಸಿ ಅಧ್ಯಕ್ಷೆ ಲೀಲಾ ಮೋಹನ್, ಕೋಶಾಧಿಕಾರಿಯ ಸುಪ್ರೀತ ರವಿಚಂದ್ರ, ಪೂರ್ವಾಧ್ಯಕ್ಷರಾದ ಡಾ.ಸದಾನಂದ ಕುಂದರ್, ಜಯಾನಂದ ಬಂಟ್ರಿಯಾಲ್, ಮೋಹನ್ ಕುಮಾರ್, ಇಸ್ಮಾಯಿಲ್, ಜಯಂತಿ ಬಿ.ಎಂ, ನವ್ಯ ಪ್ರಸಾದ್. ಮೊದಲಾದವರು ಉಪಸ್ಥಿತರಿದ್ದರು.

ಜೆಸಿಐ ನೆಲ್ಯಾಡಿಯ ಅಧ್ಯಕ್ಷೆ ಸುಚಿತ್ರಾ.ಜೆ ಬಂಟ್ರಿಯಾಲ್ ಸ್ವಾಗತಿಸಿದರು, ಡಾ.ಸದಾನಂದ ಕುಂದರ್ ಪ್ರಸ್ತಾವಿಕವಾಗಿ ಮಾತನಾಡಿದರು, ಸನ್ಮಾನಿತರ ಪರಿಚಯವನ್ನು ಜಯಾನಂದ ಬಂಟ್ರಿಯಾಲ್ ನೆರವೇರಿಸಿದರು. ಲೀಲಾಮೋಹನ್ ವಂದಿಸಿದರು.

Leave a Reply

error: Content is protected !!