ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಕೊಕ್ಕಡ ಹಾರದಲ್ಲಿ ಮನೆ ದುರೆಸ್ತಿಗೆ ಶ್ರಮದಾನ

ಶೇರ್ ಮಾಡಿ

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಿವಿದ ಸಂಘಟನೆ ಗಳ ಜಂಟಿ ಸಹಯೋಗದಲ್ಲಿ ಕೊಕ್ಕಡ ಹಾರ ಎಂಬಲ್ಲಿ ಮನೆಯೊಂದನ್ನು ದುರಸ್ಥಿಗೊಳಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.

ಚರ್ಚ್ ನ ಸಂತ ಅಲ್ಫೋನ್ಸ ಸಂಡೆ ಸ್ಕೂಲ್, ಕರ್ನಾಟಕ ಸೀರೋಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್,ವಿನ್ಸೆಂಟ್ ಡಿ ಪೌಲ್ ಸೊಸೈಟಿ, ಭಾರತೀಯ ಕ್ಯಾಥೋಲಿಕ್ ಯುವ ಸಂಚಲನ, ಇದರ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೇವಾ ಕಾರ್ಯಕ್ರಮದಲ್ಲಿ ಬಾಗವಹಿಸಿದರು.

ಸಾಮಾಜಿಕ ಬದ್ಧತೆ, ಶುಭ ಸಂದೇಶದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದು ಈ ಸಂದರ್ಭದಲ್ಲಿ ಚರ್ಚ್ ನ ಧರ್ಮ ಗುರುಗಳಾದ ವಂದನಿಯ ಫಾ.ಶಾಜಿ ಮ್ಯಾಥ್ಯು ಸೇವಾನಿರತರನ್ನು ಅಭಿನಂದಿಸಿ ಹೇಳಿದರು.

Leave a Reply

error: Content is protected !!