ನೆಲ್ಯಾಡಿ :ನಾಯರ್ ಸರ್ವಿಸ್ ಸೊಸೈಟಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಶೇರ್ ಮಾಡಿ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ,ನೆಲ್ಯಾಡಿ ಕರಯೋಗಂ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮವು ಕಳೆದ ಭಾನುವಾರದಂದು ಸೊಸೈಟಿಯ ಸಭಾಭವನದಲ್ಲಿ “ಮಹಿಳಾ ವಿಭಾಗ ,ಐಶ್ವರ್ಯ” ಪದ್ಮಿನಿ ಗುರುವಾಯನಕೆರೆ ಅವರ ಸಭಾಧ್ಯಕ್ಷತೆಯಲ್ಲಿ ನಡೆಯಿತು. ನಾಯರ್ ಸರ್ವಿಸ್ ಸೊಸೈಟಿಯ ಅಧ್ಯಕ್ಷರು ,ಬೋರ್ಡ್ ಮೆಂಬರ್ಸ್ ,ಸಂಚಾಲಕರು ಹಾಗೂ ಸರ್ವ ಸದಸ್ಯರು ಒಟ್ಟು ಸೇರಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು .

ಸುಲೋಚನಾ ಎಂಜಿರ ಅವರನ್ನು ಕರಯೋಗಂ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ನಾಯರ್ ಸರ್ವಿಸ್ ಸೊಸೈಟಿ ನೆಲ್ಯಾಡಿ ಕರಯೋಗಂ ಅಧ್ಯಕ್ಷರಾದ ಉನ್ನಿಕೃಷ್ಣನ್ ನಾಯರ್ ,ಉಪಾಧ್ಯಕ್ಷರಾದ ಮಹೇಶ್ ಕುಮಾರ್ , ಶ್ರೀಲತಾ ಮೋಹನ್ ,ಕಾರ್ಯದರ್ಶಿ ವಿನೋದ್ ಕುಮಾರ್ ,ಜೊತೆ ಕಾರ್ಯದರ್ಶಿ ರಾಜೇಶ್ ಕುಮಾರ್ , ಬೋರ್ಡ್ ಮೆಂಬರ್ ಗಳಾದ ಶಿವದಾಸನ್ ಪಿಳ್ಳೈ ,ರಘುನಾಥನ್ ನಾಯರ್ , ಚಂದ್ರಶೇಖರನ್ ನಾಯರ್,ಸಂಚಾಲಕರು ,ಮಹಿಳಾ ವಿಭಾಗದ ಅಧ್ಯಕ್ಷೆ ತಂಗಮಣಿ ಅಮ್ಮ, ಕಾರ್ಯದರ್ಶಿ ಶ್ರೀಜಾ ವಿನೋದ್ , ಶಕುಂತಲಾ ವಿನೋದ್ ಹಾಗೂ ನಾಯರ್ ಸರ್ವಿಸ್ ಸೊಸೈಟಿ ಬೆಂಗಳೂರು ,ಮಂಗಳೂರು , ನೆಟ್ಟಣ ,ಉಜಿರೆ ,ಬೆಳ್ತಂಗಡಿ ,ಕೊಕ್ಕಡ ,ಸುಳ್ಯದ  ಸದಸ್ಯರು ಉಪಸ್ಥಿತರಿದ್ದರು .

Leave a Reply

error: Content is protected !!