ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಯೋಗ ಶಿವ ನಮಸ್ಕಾರ ಕಾರ್ಯಕ್ರಮ

ಶೇರ್ ಮಾಡಿ

ಕೊಯ್ಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಆಶ್ರಯದಲ್ಲಿ ಸಾಮೂಹಿಕ ಯೋಗ ಶಿವನಮಸ್ಕಾರ ಕಾರ್ಯಕ್ರಮ ಜರಗಿತು.

ದೇವಸ್ಥಾನದ ಅರ್ಚಕರಾದ ಶ್ರೀ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇವಸ್ಥಾನದ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಚೇತನ್ ಆನೆಗುಂಡಿ, ಪುತ್ತೂರು ತಾಲೂಕು ಯೋಗಶಿಕ್ಷಣ ಸಹಪ್ರಮುಖ ಪ್ರದೀಪ್, ಯೋಗ ಬಂಧುಗಳಾದ ಶ್ರೀಮತಿ ವಾರಿಜಾಕ್ಷಿ, ಮುರಳಿಕೃಷ್ಣ ಬಡಿಲ ಉಪಸ್ಥಿತರಿದ್ದರು. ಉಪ್ಪಿನಂಗಡಿಯ ವೈದ್ಯ ಡಾ.ಗೋವಿಂದಪ್ರಸಾದ್ ಕಜೆ ಬೌದ್ಧಿಕ್ ನೀಡಿದರು.

ಉಪ್ಪಿನಂಗಡಿ, ಅಲಂಕಾರು, ನೆಲ್ಯಾಡಿ ಮತ್ತು ಕೊಯ್ಲುಯೋಗ ಶಾಖೆಯ ಸುಮಾರು 150 ಯೋಗ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಯೋಗ ಶಿಕ್ಷಕರಾದ ಸಂತೋಷ್, ಕೃಷ್ಣಪ್ಪ, ಯಶೋಧರ, ಸುಧೀಶ್, ಉದಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು

Leave a Reply

error: Content is protected !!