ವೈರಿಗಳು ಹೆಚ್ಚಿದ್ದಾರೆ, ಕುಗ್ಗಬೇಡ: ಕಟೀಲ್​ಗೆ ಎಚ್ಚರಿಕೆ ನೀಡಿದ್ದ ಅಜ್ಜಾವರ ವಿಷ್ಣುಮೂರ್ತಿ ದೈವ

ಶೇರ್ ಮಾಡಿ

ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಿದೆ. ಈ ನಡುವೆ, ಒಂದು ವಾರದ ಹಿಂದೆಯೇ ಕಟೀಲ್​ಗೆ ಸುಳ್ಯ ತಾಲೂಕಿನ ಅಜ್ಜಾವರದ ವಿಷ್ಣುಮೂರ್ತಿ ದೈವ ಎಚ್ಚರಿಕೆ ನೀಡಿತ್ತು ಎನ್ನುವ ವಿಚಾರ ಇದೀಗ ತಿಳಿದುಬಂದಿದೆ.

“ನಿನಗೆ ವೈರಿಗಳು ತುಂಬಾನೇ ಇದ್ದಾರೆ. ವೈರಿಗಳು ಎಷ್ಟಿದ್ದರೇನು ಕೊನೆಗೆ ಸತ್ಯ, ಧರ್ಮ ಮಾತ್ರ ಗೆಲ್ಲುವುದು. ಯಾವುದಕ್ಕೂ ಕುಗ್ಗಬೇಡ. ನೀನು ಹಿಂದುರುಗಿ ನೋಡಬೇಡ, ನಿನಗೆ ಮುಂದೊಂದು ದಿನ ಜಯವಿದೆ” ಎಂದು ನಳಿನ್ ಕುಮಾರ್ ಕಟೀಲ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದಲ್ಲಿ ಒಂದು ವಾರದ ಹಿಂದೆ ನಡೆದಿದ್ದ ವಯನಾಟ್ ಕುಲವನ್ ದೈವದ ನೇಮೋತ್ಸವದಲ್ಲಿ ವಿಷ್ಣುಮೂರ್ತಿ ದೈವ ಎಚ್ಚರಿಕೆ ನೀಡಿತ್ತು. ಅಲ್ಲದೆ, “ಎಲ್ಲರಿಗೂ ವೈರಿಗಳಿದ್ದರು. ಅಣ್ಣ ತಮ್ಮಂದಿರೂ ವೈರಿಗಳಾಗಿದ್ದದ್ದುಂಟು. ಕುಂತಿಯದ್ದೂ, ಧೃತರಾಷ್ಟ್ರ, ಪಾಂಡುವಿನ ಮಕ್ಕಳು ಅಣ್ಣ ತಮ್ಮಂದಿರು. ಅಣ್ಣ ತಮ್ಮಂದಿರೂ ವೈರಿಗಳಾಗಿ ಬದಲಾದರು. ಅದರಲ್ಲಿ ಪಾರ್ಥ ಸರಿಯಾದ ಮಾರ್ಗದಲ್ಲಿ ಸಾಗಿದ. ಕುರುಕ್ಷೇತ್ರವಾಯಿತು. ಸತ್ಯ ಮಾತ್ರ ಗೆಲ್ಲುತ್ತದೆ. ಅಸತ್ಯ ಗೆಲ್ಲುವುದಿಲ್ಲ. ಧರ್ಮ ಗೆಲ್ಲುತ್ತದೆ. ಅಧರ್ಮ ಗೆಲ್ಲುವುದಿಲ್ಲ. ಸತ್ಯದ ಮಾರ್ಗದಲ್ಲಿ ಸಾಗಿ. ಕೃಷ್ಣನು ಪಾರ್ಥನಲ್ಲಿ ಹೇಳಿದಂತೆ ಕುರುಕ್ಷೇತ್ರ ಭೂಮಿಯಲ್ಲಿ ಕೃಷ್ಣನೇ ಸಾರಥಿಯಾಗಿ ನೇರವಾದ ಮಾರ್ಗದಲ್ಲಿ ಕೊಂಡೊಯ್ದಂತೆ ನಾನು ನಿನ್ನನ್ನು ಕೊಂಡೊಯ್ಯುವೆ” ಎಂದು ವಿಷ್ಣುಮೂರ್ತಿ ದೈವ ಕಟೀಲ್​ಗೆ ಅಭಯ ನೀಡಿದೆ.

Leave a Reply

error: Content is protected !!