ಶಿಶಿಲ: ಲೋಕಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ

ಶೇರ್ ಮಾಡಿ

ಶಿಶಿಲದ ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಕಾರ್ಕಳ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮಿಜಿಯವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಿ.ವೀರೇಂದ್ರ ಹೆಗಡೆಯವರು ಮತ್ತು ಶ್ರೀಮತಿ ಹೇಮಾವತಿ ಅಮ್ಮನವರ ಮಾರ್ಗದರ್ಶನದೊಂದಿಗೆ. ಲೋಕಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಮಧ್ಯಾಹ್ನ ಭೋಜನದ ದಾನಿಗಳಾದ ಶ್ರೀಮತಿ ಶಶಿಪ್ರಭ ಅಹಿಂಸಾ ಉಜಿರೆ. ಪೂಜಾ ಕರ್ತೃಗಳಾದ ಶ್ರೀಮತಿ ಚಂಚಲ ಕೃಷ್ಣರಾಜ ಧರ್ಮಸ್ಥಳ, ಬೆಳಗಿನ ಉಪಹಾರದ ದಾನಿಗಳಾದ ಶ್ರೀಮತಿ ಶಕುಂತಲಾ ಡಾ.ಜಯಕೀರ್ತಿ ಜೈನ್. ಸಮಿತಿಯ ಶ್ರೀಮತಿ ಶೋಭಾ ಸಂತೋಷ್ ಜೈನ್, ಶ್ರೀಮತಿ ಚಂದನ ವೃಷಭ, ಶ್ರೀಮತಿ ವಿಮಲ ವಿಜಯ್ ಕುಮಾರ್, ಶ್ರೀಮತಿ ಶಾಂತಿ ರಾಜೇಂದ್ರ ಕುಮಾರ್ ಮುಡಾರು, ಶ್ರೀಮತಿ ಪ್ರೇಮ ವಸಂತ್ ಕುಮಾರ್ ಉಜಿರೆ, ಶ್ರೀಮತಿ ರೇಷ್ಮಾ ಫಣಿರಾಜ್, ಶ್ರೀಮತಿ ಸುರಭಿ ಜಯಕುಮಾರ್ ಇವರು ಆರಾಧನಾ ಕಾರ್ಯಕ್ರಮದಲ್ಲಿ ಪೂಜೆ ನೆರವೇರಿಸಿದರು.

ಪ್ರಧಾನ ಪುರೋಹಿತರಾಗಿ ಪ್ರತಿಷ್ಠಾಚಾರ್ಯ ಜಯರಾಜ್ ಇಂದ್ರ ಬೆಳ್ತಂಗಡಿ, ಅರಹಂತ ಇಂದ್ರ ಶಿಶಿಲ, ಕೀರ್ತಿ ಇಂದ್ರ ಬೈಲoಗಡಿ, ಚಿತ್ತರoಜನ್ ಶಿರ್ತಾಡಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಶುಗಲಿ ರಾಣಿ ಕಾಳಾಲ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಸಹಕರಿಸಿದರು

Leave a Reply

error: Content is protected !!