ಇಚ್ಲಂಪಾಡಿ: ಅಕ್ರಮ ಮರಳು ಸಾಗಾಟ -ಇಬ್ಬರ ಬಂಧನ

ಶೇರ್ ಮಾಡಿ

ನೂಜಿಬಾಳ್ತಿಲ ಗ್ರಾಮದ ಇಚ್ಲಂಪಾಡಿ ಸೇತುವೆ ಅಡಿಭಾಗದಿಂದ ಅಧಿಕಾರಿಗಳು ಕಂದಕ ನಿರ್ಮಿಸಿದ್ದರೂ ಅದನ್ನು ಮುಚ್ಚಿ ರಾಜರೋಷವಾಗಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ವಾಹನ ಸಹಿತ ಕಡಬ ಪೊಲೀಸರು ವಶಕ್ಕೆ ಪಡೆದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಕಡಬ ತಾಲೂಕು ನೂಳಿಬಾಳ್ತಿಲ ಗ್ರಾಮದ ಪ್ರಭಾಕರ ಮತ್ತು ಸಜಿ ಅಕ್ರಮ ಮರಳು ಸಾಗಾಟ ಮಾಡುತ್ತಿರುವಾಗ ಸಿಕ್ಕಿಬಿದ್ದು ಜೈಲು ಸೇರಿದವರು. ಕಡಬ ಠಾಣಾ ಎಸ್.ಐ ಅಭಿನಂದನ್ ಅವರು ಮಾ.14 ರ ನಸುಕಿನ ಜಾವ 03 ರ ಸುಮಾರಿಗೆ ನೂಜಿಬಾಳ್ತಿಲ ಗ್ರಾಮದಲ್ಲಿ ಹರಿಯುತ್ತಿರುವ ಗುಂಡ್ಯ ಹೊಳೆಯಲ್ಲಿ ಅಕ್ರಮವಾಗಿ ಮರಳನ್ನು ಕಳವು ಮಾಡಿ ವಾಹನಗಳಲ್ಲಿ ತುಂಬಿಸಿಕೊಂಡು ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದರು. ಸಿಬ್ಬಂದಿಗಳ ನೆರವಿನೊಂದಿಗೆ ಕಾರ್ಯಾಚರಣೆ ಮಾಡಿದ ವೇಳೆ ಪಿಕಪ್ ವಾಹನ ಮತ್ತು ಮಿನಿ ಲಾರಿಯನ್ನು ಮರಳು ಸಹಿತ ವಶಕ್ಕೆ ಪಡೆದಿದ್ದಾರೆ.

ಮಣ್ಣು ರಸ್ತೆಯಿಂದ ಕಲ್ಲುಗುಡ್ಡೆ ಡಾಮಾರು ರಸ್ತೆಯಲ್ಲಿ ಹೆದ್ದಾರಿ ರಸ್ತೆ ಕಡೆಗೆ ಪಿಕಪ್ ವಾಹನವೊಂದು ಬರುತ್ತಿದ್ದ ಪಿಕಪ್ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದಾಗ ಪಿಕಪ್ ವಾಹನದಲ್ಲಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.ಇನ್ನೊಂದು ವಾಹನವನ್ನು ನದಿಯಲ್ಲೇ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಯಾವುದೇ ಪರವಾನಗಿ ಇಲ್ಲದಿರುವುದು ಕಂಡು ಬಂದಿದೆ.ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

error: Content is protected !!