ಮಾ.17ರಂದು ಹೊಸಮಜಲು ಶಾಲೆಯಲ್ಲಿ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮ ಹಾಗೂ ಉಚಿತ ಔಷಧಿ ವಿತರಣಾ ಶಿಬಿರ

ಶೇರ್ ಮಾಡಿ

ನೆಲ್ಯಾಡಿ: ಹೊಸಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ.17 ರಂದು ನೆಲ್ಯಾಡಿ ಜೇಸಿಐ ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧ. ಗ್ರಾ.ಯೋಜನೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೌಕ್ರಾಡಿ, ವರ್ತಕ ಹಾಗೂ ಕೈಗಾರಿಕಾ ಸಂಘ ನೆಲ್ಯಾಡಿ- ಕೌಕ್ರಾಡಿ, ಅಶ್ವತ್ಥ ಗೆಳೆಯರ ಬಳಗ(ರಿ.) ಹೊಸಮಜಲು-ಕೌಕ್ರಾಡಿ, ಕೌಕ್ರಾಡಿ ಗ್ರಾಮ ಪಂಚಾಯತ್, ಶಾಲಾ ಅಭಿವೃದ್ಧಿ ಸಮಿತಿ ಸ.ಹಿ.ಪ್ರಾ. ಶಾಲೆ ಹೊಸಮಜಲು ಇವರ ಸಹಕಾರದೊಂದಿಗೆ ಕೆ.ವಿ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ದ.ಕ ಇವರುಗಳ ಸಹಯೋಗದೊಂದಿಗೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಗಾರ ಹಾಗೂ ಉಚಿತ ಔಷಧಿ ವಿತರಣಾ ಶಿಬಿರ ನಡೆಯಲಿದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಜೇಸಿಐ ನ ಅಧ್ಯಕ್ಷೆ ಜೇಸಿ.ಸುಚಿತ್ರಾ ಜೆ ಬಂಟ್ರಿಯಾಲ್, ಉದ್ಘಾಟನೆಯನ್ನು ಕೌಕ್ರಾಡಿ ಗ್ರಾ.ಪಂ ಅಧ್ಯಕ್ಷ ಲೋಕೇಶ್ ಬಾಣಜಾಲು, ಗಣ್ಯ ಉಪಸ್ಥಿತಿ ಅಕಾಡಮಿ ಆಫ್ ಲಿಬರಲ್ ಎಜುಕೇಶನ್ ಮತ್ತು ವೈದ್ಯಕೀಯ ನಿರ್ದೇಶಕರು ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಇದರ ಅಧ್ಯಕ್ಷ ಡಾ.ಕೆ. ವಿ. ಚಿದಾನಂದ, ಉಪಸ್ಥಿತಿ ಸತೀಶ್ ಕೆ.ಎಸ್ ಅಧ್ಯಕ್ಷರು ವರ್ತಕ ಮತ್ತು ಕೈಗಾರಿಕಾ ಸಂಘ ನೆಲ್ಯಾಡಿ- ಕೌಕ್ರಾಡಿ, ವಿಜೇಶ್ ಜೈನ್ ವಲಯ ಮೇಲ್ವಿಚಾರಕರು, ಗ್ರಾಮಾಭಿವೃದ್ಧಿ ನೆಲ್ಯಾಡಿ ವಲಯ, ವಂದನ್ ಕುಮಾರ್ ಅಧ್ಯಕ್ಷರು ಅಶ್ವತ್ಥ ಗೆಳೆಯರ ಬಳಗ(ರಿ.) ಹೊಸ ಮಜಲು – ಕೌಕ್ರಾಡಿ, ಶ್ರೀಮತಿ ಪ್ರೇಮ ಮುಖ್ಯೋಪಾಧ್ಯಾಯನಿ, ಸ.ಹಿ.ಪ್ರಾ. ಶಾಲೆ ಹೊಸ ಮಜಲು, ಬಾಲಕೃಷ್ಣ ಗೌಡ ಅಧ್ಯಕ್ಷರು ಪ್ರಗತಿ ಬಂಧು ಒಕ್ಕೂಟ ಕೌಕ್ರಾಡಿ, ಆಶೀಕ್ ಇಸ್ಮಾಯಿಲ್, ಶಾಲಾ ಅಭಿವೃದ್ಧಿ ಸಮಿತಿ ಸ.ಹಿ.ಪ್ರಾ. ಶಾಲೆ ಹೊಸಮಜಲು ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ದೊರೆಯುವ ಸೌಲಭ್ಯಗಳು:
ಜನರಲ್ ಮೆಡಿಸಿನ್ ವಿಭಾಗ , ಶಸ್ತ್ರಚಿಕಿತ್ಸಾ ವಿಭಾಗ, ಮಕ್ಕಳ ರೋಗ ವಿಭಾಗ, ಕಿವಿ, ಮೂಗು, ಗಂಟಲು ರೋಗ ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಚರ್ಮರೋಗ ಮತ್ತು ಲೈಂಗಿಕ ರೋಗ ವಿಭಾಗ, ಸ್ತ್ರೀರೋಗ ವಿಭಾಗ, ಎಲುಬು ಮತ್ತು ಕೀಲು ವಿಭಾಗ, ದಂತ ಚಿಕಿತ್ಸಾ ವಿಭಾಗ, ಶ್ವಾಸಕೋಶ ವಿಭಾಗ, ತುರ್ತು ಚಿಕಿತ್ಸಾ ವಿಭಾಗ ಮುಂತಾದ ಭಾಗಗಳ ಉಚಿತ ವೈದ್ಯಕೀಯ ತಪಾಸಣೆ ಮತ್ತು ಸಲಹೆ ಶಿಬಿರದಲ್ಲಿ ದೊರೆಯುತ್ತದೆ. ಎಂದು ಸಂಘಟಕರು ತಿಳಿಸಿದರು.

Leave a Reply

error: Content is protected !!