ನಾಲ್ಕು ಇಂಚಿನ ಬಾಲದೊಂದಿಗೆ ಜನಿಸಿದ ಮಗು; ಬೆರಗಾದ ವೈದ್ಯ ಲೋಕ

ಶೇರ್ ಮಾಡಿ

ನೆರೆ ರಾಷ್ಟ್ರ ಚೀನಾದಲ್ಲಿ ವೈದ್ಯ ಲೋಕವನ್ನೇ ಬೆರಗಾಗಿಸುವ ಅಚ್ಚರಿಯ ಘಟನೆಯೊಂದು ನಡೆದಿದ್ದು, ನಾಲ್ಕು ಇಂಚಿನ ಬಾಲದೊಂದಿಗೆ ಮಗುವೊಂದು ಜನಿಸಿದೆ. ಈ ಕುರಿತ ಸುದ್ದಿಯೊಂದು ಸದ್ಯ ವೈರಲ್ ಆಗುತ್ತಿದೆ. ಅಷ್ಟಕ್ಕೂ ನವಜಾತ ಶಿಶುವಿನಲ್ಲಿ ಮಂಗನಂತೆ ಬಾಲ ಏಕೆ ಬೆಳೆಯಿತು, ಇದರ ಹಿಂದಿನ ಕಾರಣವನ್ನು ತಿಳಿಯಿರಿ.

ಪ್ರಪಂಚದಲ್ಲಿ ಕೆಲವೊಂದು ಅಚ್ಚರಿಯ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ಘಟನೆಗಳು ಹಿಂಗೂ ನಡೆಯಲು ಸಾಧ್ಯಾನಾ ಅಂತ ಬಾಯಿ ಮೇಲೆ ಬೆರಳಿಡುವಂತೆ ಮಾಡುತ್ತದೆ. ಸದ್ಯ ಅಂತಹ ಸುದ್ದಿಯೊಂದು ಇದೀಗ ವೈರಲ್ ಆಗಿದ್ದು, ನೆರೆ ರಾಷ್ಟ್ರ ಚೀನಾದಲ್ಲಿ ನಾಲ್ಕು ಇಂಚಿನ ಬಾಲದೊಂದಿಗೆ ಮಗುವೊಂದು ಜನಿಸಿದೆ. ಈ ಘಟನೆ ವೈದ್ಯ ಲೋಕವನ್ನೇ ಬೆರಗಾಗಿಸಿದೆ.

ವರದಿಗಳ ಪ್ರಕಾರ ಚೀನಾದ ಹ್ಯಾಂಗ್ಝೌ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ಈ ಮಗುವಿನ ಬೆನ್ನಿನ ಭಾಗದಲ್ಲಿ ಬಾಲವಿರುವುದು ಪತ್ತೆಯಾಗಿದೆ. ಇದೊಂದು ಅಸಹಜ ಬೆಳವಣಿಗೆಯಾಗಿದ್ದು, ಬೆನ್ನುಮೂಳೆಗೆ ಸಂಬಂಧಿಸಿದ ಅಸ್ವಸ್ಥತೆಗಳ ಕಾರಣದಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯ ಪೀಡಿಯಾಟ್ರಿಕ್ ನ್ಯೂರೋಸರ್ಜರಿ ವಿಭಾಗದ ವೈದ್ಯ ಡಾ.ಲೀ ನವಜಾತ ಶಿಶುವಿನ ಬೆನ್ನಿನ ಭಾಗದಲ್ಲಿ ಬಾಲ ಇರುವುದನ್ನು ಪತ್ತೆ ಹಚ್ಚಿದ್ದು,

ಮಗುವಿನ ದೇಹದಲ್ಲಿ ಬಾಲ ಏಕೆ ಬೆಳೆಯಿತು?
ಮಗುವಿನ ಬೆನ್ನುಹುರಿ ಸರಿಯಾಗಿ ಬೆಳವಣಿಗೆಯಾಗದಿದ್ದಾಗ ಸಂಭವಿಸುವ ಜನ್ಮ ದೋಷದಿಂದ ಈ ರೀತಿ ಬಾಲದಂತಹ ಅಂಗ ಬೆಳವಣಿಗೆಯಾಗುತ್ತದೆ ಎಂದು ಡಾ.ಲೀ ಹೇಳಿದ್ದಾರೆ. ಇದು ಬೆನ್ನು ಹುರಿಯ ಸುತ್ತಮುತ್ತಲಿನ ಅಂಗಾಂಶಗಳಿಗೆ ಅಸಹಜವಾಗಿ ಜೋಡಿಸಲ್ಪಟ್ಟಿರುವ ಒಂದು ರೀತಿಯ ಸ್ಥಿತಿಯಾಗಿದ್ದು, ಇದರಿಂದ ಬಾಲ ಬೆಳೆಯುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಇಂತಹ ಸ್ಥಿತಿ ಯಾರಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಇಂತಹ ಸಮಸ್ಯೆಗಳು ಸಂಭವಿಸಿದರೆ ಅದು ನರ ಸಂಬಂಧಿ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಈ ಹಿಂದೆಯೂ ಬಾಲದೊಂದಿಗೆ ಮಗು ಜನಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ:
ಬಾಲದೊಂದಿಗೆ ಮಗು ಜನಿಸಿದ ಪ್ರಕರಣ ಬೆಳಕಿಗೆ ಬಂದಿರುವುದು ಇದೇ ಮೊದಲಲ್ಲ. ವರದಿಗಳ ಪ್ರಕಾರ 2017 ರ ವರೆಗ ಇಂತಹ 195 ಪ್ರಕರಣಗಳು ವರದಿಯಾಗಿವೆ. 2021 ರಲ್ಲಿ ಬ್ರೆಜಿಲ್ ನಲ್ಲಿ ಹೆಣ್ಣು ಮಗು ಹಾಗೂ 2022 ರಲ್ಲಿ ಮೆಕ್ಸಿಕೋದಲ್ಲಿ ಹೆಣ್ಣು ಮಗುವೊಂದು ಬಾಲದೊಂದಿಗೆ ಜನಿಸಿದ ಪ್ರಕರಣವೂ ವರದಿಯಾಗಿದೆ. ಇದೀಗ ಚೀನಾದಲ್ಲಿಯೂ ಇಂತಹ ಅಚ್ಚರಿಯ ಪ್ರಕರಣ ವರದಿಯಾಗಿದ್ದು, ವೈದ್ಯ ಲೋಕವನ್ನು ಬೆರಗಾಗಿಸಿದೆ.

Leave a Reply

error: Content is protected !!