ಕಾಯ೯ತ್ತಡ್ಕ: ತಾಯಿ ಪುಟ್ಟ ಮಗುವಿನೊಂದಿಗೆ ನಾಪತ್ತೆ

ಶೇರ್ ಮಾಡಿ

ಕಳೆಂಜ ಗ್ರಾಮದ ಕಾಯ೯ತ್ತಡ್ಕದಲ್ಲಿ ತಾಯಿ ಪುಟ್ಟ ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಮಾ.23ರಂದು ವರದಿಯಾಗಿದೆ.

ಕಳೆಂಜ ಗ್ರಾಮದ ಕಾಯ೯ತ್ತಡ್ಕ ನಿವಾಸಿ ವೆಂಕಪ್ಪ ಗೌಡ ಅವರ ಪತ್ನಿ ಜಯಶ್ರೀ (29ವ) ಹಾಗೂ ಅವರ ಪುತ್ರಿ ರುಷಿಕಾ (9ತಿಂಗಳು) ನಾಪತ್ತೆಯಾದವರು.

ಮಾ.22ರಂದು ರಾತ್ರಿ ಶ್ರೀಮತಿ ಜಯಶ್ರೀ ರೂಮಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಮಲಗಿದ್ದು, ವೆಂಕಪ್ಪ ಗೌಡ ಅವರು ಮನೆಯ ಹಾಲ್ ನಲ್ಲಿ ಮಲಗಿದ್ದರು. ಮರುದಿನ ಮಾ.23 ರಂದು ಬೆಳಿಗೆ 7.30ಕ್ಕೆ ವೆಂಕಪ್ಪ ಗೌಡರು ಎದ್ದು ನೋಡಿದಾಗ ಮನೆಯಲ್ಲಿ ಪತ್ನಿ ಜಯಶ್ರೀ ಹಾಗೂ ಆಕೆಯ 9 ತಿಂಗಳ ಮಗು ರುಷಿಕಾಳೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ.

ಈ ಬಗ್ಗೆ ವೆಂಕಪ್ಪ ಗೌಡ ಅವರು ನೀಡಿದ ದೂರಿನಂತೆ ಧಮ೯ಸ್ಥಳ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.

Leave a Reply

error: Content is protected !!