ಎ.10ರಿಂದ 16ರ ವರೆಗೆ ಕಡಬದಲ್ಲಿ ಮಕ್ಕಳ ಮೋಜಿನ ಬೇಸಿಗೆ ಶಿಬಿರ

ಶೇರ್ ಮಾಡಿ

ಕಡಬ: ಕಳೆದ 14 ವರ್ಷಗಳಿಂದ ಕಡಬದಲ್ಲಿ ಕಾರ್ಯಾಚರಿಸುತ್ತಿರುವ ಐಐಸಿಟಿ ಎಜುಕೇಶನ್ ಸೆಂಟರ್ ನಲ್ಲಿ ಮಕ್ಕಳ ಮೋಜಿನ ಬೇಸಿಗೆ ಶಿಬಿರ ಎ.10 ರಿಂದ 16ರ ವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರ ತನಕ ನಡೆಯಲಿದೆ.

ಶಿಬಿರದಲ್ಲಿ ಪೇಪರ್ ಕ್ರಾಫ್ಟ್, ಹಳ್ಳಿಯ ಆಟಗಳು, ಗಾಳಿಪಟ, ಗೂಡುದೀಪ, ಬೆಂಕಿ ಇಲ್ಲದೆ ಅಡುಗೆ, ಮೋಜಿನ ಆಟಗಳು, ಯೋಗ, ಡ್ಯಾನ್ಸ್, ಸಂಗೀತ, ಸ್ಪೋಕನ್ ಇಂಗ್ಲಿಷ್, ಅಬಾಕಸ್, ಸ್ಕ್ರಾಪ್ ಬುಕ್ ತಯಾರಿ, ಕಂಪ್ಯೂಟರ್ ಚಿತ್ರಕಲೆ ಹಾಗೂ ಇನ್ನಿತರ ಚಟುವಟಿಕೆಗಳಿದ್ದು ಮಕ್ಕಳ ಕಲ್ಪನೆಗೆ, ಮೋಜಿಗೆ ಅವರ ವ್ಯಕ್ತಿತ್ವ ವಿಕಸನ ಹಾಗೂ ಮನೋಚಲ ವೃದ್ಧಿಗೆ ಅನುಕೂಲವಾಗಲಿದೆ. ವಿಶೇಷ ತರಬೇತಿ ಪಡೆದ ನುರಿತ ಶಿಕ್ಷಕ-ಶಿಕ್ಷಕಿಯರು ತರಬೇತಿ ನೀಡಲಿದ್ದಾರೆ.

ಆಸಕ್ತ ಎಲ್ ಕೆ ಜಿ, ಯುಕೆಜಿ ಯಿಂದ 7ನೇ ತರಗತಿಯ ವರೆಗಿನ ಯಾವುದೇ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ 9148121463, 9448409912 ನಂಬರನ್ನು ಸಂಪರ್ಕಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!