ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ ಮೌಲ್ಯಮಾಪನದಲ್ಲಿ ‘A’ ಗ್ರೇಡ್

ಶೇರ್ ಮಾಡಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧೀನಕೊಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯಕ್ಕೆ 2024ನೇ ಮಾರ್ಚ್ 13 ಮತ್ತು 14 ರಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ( NAAC) ತಂಡವು ಭೇಟಿ ನೀಡಿ ಮೌಲ್ಯಮಾಪನ ಪ್ರಕ್ರಿಯೆ ನಡೆಸಿರುತ್ತದೆ.

ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ ನಿಯಮಾನುಸಾರ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರತಿ ಐದು ವರ್ಷಗಳಿಗೊಮ್ಮೆ ಗುಣಮಟ್ಟ ಮೌಲ್ಯಮಾಪನ ಕ್ಕೊಳಗಾಗಬೇಕಾದದ್ದು ಕಡ್ಡಾಯವಾಗಿರುತ್ತದೆ. ನಮ್ಮ ಸಂಸ್ಥೆಯ ಕಳೆದ ಎರಡು ಬಾರಿ NAAC ಮೌಲ್ಯಮಾಪನ ಕೊಡಪಟ್ಟು ‘B’ ಗ್ರೇಡ್ ಪಡೆದಿರುತ್ತದೆ. ಪ್ರಸ್ತುತ ಮೂರನೇ ಸಲದ ಮೌಲ್ಯಮಾಪನದಲ್ಲಿ ‘A’ ಗ್ರೇಡ್ ಪಡೆದಿರುತ್ತದೆ.

ಕಳೆದ ಒಂದುವರೆ ವರ್ಷಗಳಿಂದ ಸ್ವ ಅಧ್ಯಯನ ವರದಿ (SSR) ಸಲ್ಲಿಕೆ ಮತ್ತು ನ್ಯಾಕ್ ತಂಡದ ಭೇಟಿ ಸಮಯಕ್ಕೆ ಸೂಕ್ತ ತಯಾರಿಗಾಗಿ ಆಡಳಿತಾತ್ಮಕ ಸಹಕಾರ ನೀಡಿದ ದೇವಳದ ವಿದ್ಯಾಸಂಸ್ಥೆಗಳ ಸಕ್ಷಮ ಪ್ರಾಧಿಕಾರಿಗಳಾದ ಹಿಂದೂ ಧರ್ಮದಾಯದತ್ತಿಗಳ ಇಲಾಖೆಯ ಮಾನ್ಯ ಆಯುಕ್ತರಾದ ಶ್ರೀ. ಹೆಚ್. ಬಸವರಾಜೇಂದ್ರ ಅವರಿಗೆ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರಿಗೆ, ಕಾಲೇಜು ಆಡಳಿತ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಗಳು ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಕಾರ್ಯನಿರ್ವಹಣಾಧಿಕಾರಿಗಳಾಗಿರುವ ಡಾ.ನಿಂಗಯ್ಯನವರಿಗೆ, ಕಾಲೇಜಿನ ಅಭಿವೃದ್ಧಿಯಲ್ಲಿ ವಿಶೇಷ ಕಾಳಜಿ ವಹಿಸಿದ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮಾನ್ಯ ಶ್ರೀ ಶ್ರೀವತ್ಸ ಬೆಂಗಳೂರು ಇವರಿಗೆ, ನಮ್ಮೊಂದಿಗಿದ್ದು ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರಿಗೆ, ಕಾಲೇಜಿನ ಬಗ್ಗೆ ಸದಾ ಕಾಳಜಿ ಹೊಂದಿರುವ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರಿಗೆ, ಕಾಲೇಜಿನ ಎಲ್ಲಾ ಕೆಲಸಗಳಿಗೆ ಸಹಾಯ ಮಾಡಿದ ದೇವಳದ ಎಲ್ಲಾ ಸಿಬ್ಬಂದಿಗಳಿಗೆ ಮತ್ತು ನಮಗೆ ಸದಾ ಮೌಲ್ಯಯುತವಾದ ತಮ್ಮ ಅನುಭವದ ಸಲಹೆ ಸೂಚನೆಗಳನ್ನು ನೀಡಿದ ನಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲರುಗಳಿಗೆ, ಪ್ರಾಧ್ಯಾಪಕರಿಗೆ, ಬೋಧಕೇತರ ಸಿಬ್ಬಂದಿಗಳಿಗೆ, ಕಾಲೇಜಿನ ಎಲ್ಲಾ ಹಿತೈಷಿಗಳಿಗೆ, ಕಾಲೇಜಿನ ಎಲ್ಲಾ ಸಿಬ್ಬಂದಿಗಳ ಅವಿರತ ಶ್ರಮ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಜೊತೆ ಕೈಜೋಡಿಸಿ ವಿವಿಧ ಕೆಲಸ ಕಾರ್ಯಗಳಲ್ಲಿ ಶ್ರಮಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

Leave a Reply

error: Content is protected !!