ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

ಶೇರ್ ಮಾಡಿ

ಮಂಗಳೂರು: ನಗರ ಹೊರಲಯದ ವಳಚ್ಚಿಲ್‌ನ ಮನೆಯೊಂದರಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಗೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ 180 ಕೆ.ಜಿ. ದನದ ಮಾಂಸ ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಅಡ್ಯಾರ್ ವಳಚ್ಚಿಲ್ ನಿವಾಸಿ ಖಾದರ್ ಮಹಮ್ಮದ್ ಯಾನೆ ಮೋನು (52), ಮಾರಿಪ್ಪಳ ನಿವಾಸಿ ಇಸ್ಮಾಯಿಲ್ (27), ಅಡ್ಯಾರ್‌ಪದವು ನಿವಾಸಿ ಮಹಮ್ಮದ್ ಶವೀರ್ (18) ಬಂಧಿತ ಆರೋಪಿಗಳು.

ಆರೋಪಿ ವಳಚ್ಚಿಲ್ ಖಾದರ್ ಮಹಮ್ಮದ್ ಮನೆಯ ಶೆಡ್‌ನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ-2020 ರಂತೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

error: Content is protected !!