ಕಡಬ ತಾಲೂಕು ಕೊಯಿಲ ಗ್ರಾಮದ ಕೆಮ್ಮಾರ ಆಕೀರ ಎಂಬಲ್ಲಿ ಇಲ್ಯಾಸ್ ಎಂಬವರ ಮನೆಯಲ್ಲಿ ಅಕ್ರಮವಾಗಿ ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕಡಬ ಪೊಲೀಸ್ ಠಾಣಾ ಪಿ.ಎಸ್.ಐ ಅಭಿನಂದನ್ ಎಂ.ಎಸ್ ಹಾಗೂ ಸಿಬ್ಬಂದಿಗಳು ಮಾ.28ರಂದು ಬೆಳಿಗ್ಗೆ ದಾಳಿ ಮಾಡಿರುವ ಘಟನೆ ನಡೆದಿದೆ.
ಪೊಲೀಸ್ ದಾಳಿ ವೇಳೆ ಕೊಯಿಲ ಗ್ರಾಮದ ಇಲ್ಯಾಸ್ ಮತ್ತು ಬೆಳ್ತಂಗಡಿ ತಾಲೂಕು ಕಲ್ಲೇರಿ ನಿವಾಸಿ ಮಹಮ್ಮದ್ ಆಮು ಎಂಬವರು ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಜಾನುವಾರುಗಳ ವಧೆ ಮಾಡುತ್ತಿರುವುದು ಕಂಡುಬಂದಿದ್ದು, ಸ್ಥಳದಲ್ಲಿದ್ದ ಜಾನುವಾರುಗಳ ಮಾಂಸ, ತ್ಯಾಜ್ಯ ಹಾಗೂ ಜಾನುವಾರು ವಧೆಗೆ ಬಳಸಿದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಓರ್ವ ಆರೋಪಿ ಇಲ್ಯಾಸ್ ನನ್ನು ಪೊಲೀಸರು ಬಂಧಿಸಿದ್ದು ಇನ್ನೋರ್ವ ಆರೋಪಿ ಮಹಮ್ಮದ್ ಆಮು ಎಂಬಾತ ಪರಾರಿಯಾಗಿದ್ದಾನೆ.
ಈ ಬಗ್ಗೆ ಕಡಬ ಪೊಲೀಸರು ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ-2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.