ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಲ್ಲಿ ಸುದೀರ್ಘ 36 ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಸುಬ್ರಹ್ಮಣ್ಯ ಸೀತಾರಾಮ ಭಟ್ಟ ಅವರು ಮಾ.31 ರಂದು ನಿವೃತ್ತಿಯಾಗಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದವರಾದ ಸುಬ್ರಹ್ಮಣ್ಯ ಸೀತಾರಾಮ ಭಟ್ಟ ಅವರು 15-06-1987 ರಂದು ಬೆಥನಿ ವಿದ್ಯಾಸಂಸ್ಥೆಗೆ ಪದವೀಧರ ಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿ ಸಹ ಶಿಕ್ಷಕರಾಗಿ, ಹಿರಿಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ನಿಷ್ಕಳಂಕ, ನಿಷ್ಕಪಟ, ನಿರಂತರ ಸೇವೆಯಿಂದ ಒಬ್ಬ ಸಮರ್ಥ ಶಿಕ್ಷಕರಾಗಿ ಜೀವನದ್ದಕ್ಕೂ ವೃತ್ತಿ ಪಾವಿತ್ರತೆಯನ್ನು ಕಾಪಾಡಿಕೊಂಡು ಬಂದ ತಮ್ಮ ನಡೆ, ನುಡಿ ಅನುಕರಣಿಯವಾಗಿದ್ದು ಎಲ್ಲಾ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುವಾಗಿ ಸೇವೆ ಸಲ್ಲಿಸಿದ್ದಾರೆ.