ಗೋಳಿತ್ತೊಟ್ಟು: ದ್ವಿಚಕ್ರ ವಾಹನಗಳ ಅಪಘಾತದ ಗಾಯಾಳು ನಿಧನ

ಶೇರ್ ಮಾಡಿ

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸಮೀಪ ಮಾ.30ರಂದು ರಾತ್ರಿ ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸಾವರ, ಗೋಳಿತ್ತೊಟ್ಟು ಗ್ರಾಮದ ಸಣ್ಣಂಪಾಡಿ ನಿವಾಸಿ ವಿನಯ್(36ವ.)ಅವರು ಚಿಕಿತ್ಸೆಗೆ ಸ್ಪಂದಿಸದೆ ಮಾ.31ರ ಮಧ್ಯಾಹ್ನದ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಣ್ಣಂಪಾಡಿ ನಿವಾಸಿ ಜೇಕಬ್ ಅವರ ಪುತ್ರ, ಎಲೆಕ್ಟ್ರಿಷಿಯನ್ ಆಗಿದ್ದ ವಿನಯ್ ಅವರು ತನ್ನ ಬೈಕ್‌ನಲ್ಲಿ ಸಣ್ಣಂಪಾಡಿಯಿಂದ ಗೋಳಿತ್ತೊಟ್ಟು ಕಡೆಗೆ ಬರುತ್ತಿದ್ದ ವೇಳೆ ಕೊಕ್ಕಡದಿಂದ ಉಪ್ಪಿನಂಗಡಿ ಕಡೆಗೆ ಕೊಕ್ಕಡದ ರಜನೀಶ್ ಹಾಗೂ ಗಗನ್ ಎಂಬವರು ಹೋಗುತ್ತಿದ್ದ ಬೈಕ್ ನಡುವೆ ಗೋಳಿತ್ತೊಟ್ಟು ಸಮೀಪದ ಶಿರಾಡಿಗುಡ್ಡೆ ಎಂಬಲ್ಲಿ ಡಿಕ್ಕಿ ಸಂಭವಿಸಿತ್ತು. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನಯ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಮಾ.31ರ ಮಧ್ಯಾಹ್ನದ ವೇಳೆಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮೃತ ವಿನಯ್ ಅವರು ತಂದೆ ಜೇಕಬ್, ತಾಯಿ ಮೇರಿ, ಪತ್ನಿ ಅಂಜು, ಪುತ್ರ ಡ್ಯಾನ್, ಸಹೋದರ ಮನೀಶ್ ಅವರನ್ನು ಅಗಲಿದ್ದಾರೆ.

Leave a Reply

error: Content is protected !!