ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ಮಹಿಳೆ ಜೊತೆ ಅನುಚಿತ ವರ್ತನೆ ಮಾಡಿ

ಶೇರ್ ಮಾಡಿ

ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ಮಹಿಳೆ ಜೊತೆ ಅನುಚಿತ ವರ್ತನೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಕೇಳಿ ಬಂದಿದ್ದು,ಸುಬ್ರಮಣ್ಯನಗರ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

ಕಾರ್ ಟಚ್ ಮಾಡಿ ಅವಾಚ್ಯ ಶಬ್ಧಗಳ ನಿಂದನೆ ಆರೋಪ ಮಾಡಲಾಗಿದ್ದು, ಶಾರದಾ ಬಾಯಿ ಎಂಬ ಮಹಿಳೆಗೆ ನಿಂದಿಸಿರುವ ಆರೋಪ ಕೇಳಿ ಬಂದಿದೆ. ರಾಜ್ ಕುಮಾರ್ ರಸ್ತೆಯ 10 ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ.

ಕಾರ್ ಟಚ್ ಮಾಡಿದ್ದಲ್ಲದೇ ಯಾವಳೇ ನೀನು ಅಂತಾ ಅವಾಚ್ಯ ಶಬ್ದ ಬಳಸಿರೋ ಆರೋಪ ಕೇಳಿ ಬಂದಿದೆ. 30ನೇ ತಾರೀಖು ರಾತ್ರಿ ಘಟನೆ ನಡೆದಿದೆ. ಸದ್ಯ ಶಿವರಾಜ್ ಕೆಆರ್ ಪೇಟೆ ಅವರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಎನ್ ಸಿ ಆರ್ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಲಿದ್ದಾರೆ.

Leave a Reply

error: Content is protected !!