ಮನೆಗೆ ಅಕ್ರಮ ಪ್ರವೇಶ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ: ದೂರು ದಾಖಲು

ಶೇರ್ ಮಾಡಿ

ಹತ್ಯಡ್ಕ ಇಲ್ಲಿಯ ಅರಸಿನಮಕ್ಕಿ ನಿವಾಸಿ ಸೀತಾರಾಮ ರೈ ರವರ ಮನೆಯ ಅಂಗಳಕ್ಕೆ ನೆರೆಕರೆಯ ನಿವಾಸಿ ದಿಲೀಪ್‌ ಎಂಬಾತನು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಹತ್ಯಡ್ಕ ಗ್ರಾಮ, ಅರಸಿನಮಕ್ಕಿ ನಿವಾಸಿ ಸೀತಾರಾಮ.ರೈ(48) ಎಂಬವರ ದೂರಿನಂತೆ, ಎ. 02ರಂದು ರಾತ್ರಿ, ಹತ್ಯಡ್ಕ ಗ್ರಾಮದ ಬನತ್ತಡಿ ಎಂಬಲ್ಲಿರುವ ಸೀತಾರಾಮ ಮನೆಯ ಅಂಗಳಕ್ಕೆ ನೆರೆಕೆರೆಯ ನಿವಾಸಿ ಆರೋಪಿ ದಿಲೀಪ್‌ ಎಂಬಾತನು ಕೈಯಲ್ಲಿ ಕಬ್ಬಿಣದ ದೊಣ್ಣೆಯನ್ನು ಹಿಡಿದು ಅಕ್ರಮ ಪ್ರವೇಶ ಮಾಡಿ, ಸೀತಾರಾಮ ರವರನ್ನು ಉದ್ದೇಶಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕಲ್ಲೊಂದನ್ನು ಅವರ ಪತ್ನಿಯ ತಲೆಗೆ ಬಿಸಾಡಿ ಜೀವ ಬೆದರಿಕೆ ಹಾಕಿರುತ್ತಾನೆ, ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

error: Content is protected !!