ಕಡಬ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಜನಜಾಗೃತಿ ವೇದಿಕೆಯ ಸಭೆ

ಶೇರ್ ಮಾಡಿ

ಕಡಬ ತಾಲೂಕು ಜನಜಾಗೃತಿ ವೇದಿಕೆಯ ಸಭೆಯು ಕಡಬ ತಾಲೂಕು ಯೋಜನಾ ಕಛೇರಿಯ ಸಭಾಂಗಣದಲ್ಲಿ ವೇದಿಕೆಯ ಅಧ್ಯಕ್ಷರಾದ ಮಹೇಶ್ ಕೆ ಸವಣೂರು ಇವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆಯಿತು.

ದ.ಕ.ಜಿಲ್ಲೆ ವಿಭಾಗ – 2 ರ ನಿರ್ದೇಶಕರಾದ ಪ್ರವೀಣ್ ಕುಮಾರ್, ಕರಾವಳಿ ಪ್ರಾದೇಶಿಕ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ , ಕಡಬ ತಾಲೂಕು ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಸೀತಾರಾಮ ಗೌಡ ಪೊಸವಳಿಕೆ ,ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ವಲಯ ಒಕ್ಕೂಟದ ಅಧ್ಯಕ್ಷರುಗಳು , ವಲಯದ ಮೇಲ್ವಿಚಾರಕರು ಹಾಗೂ ನವಜೀವನ ಸಮಿತಿಯ ಪೋಷಕರು ಸಭೆಯಲ್ಲಿ ಹಾಜರಿದ್ದರು.

ಸಭೆಯ ಉದ್ಘಾಟನೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರು ಉದ್ಘಾಟಿಸಿ, ಮದ್ಯ ಮುಕ್ತ ಚುನಾವಣೆ ನಡೆಸುವ ಬಗ್ಗೆ ‘ಕರಪತ್ರ ಬಿಡುಗಡೆ’ ಮಾಡಿದರು
ಜಿಲ್ಲಾ ನಿರ್ದೇಶಕರು ಸಭೆಯ ಮಹತ್ವ ಮತ್ತು ಧ್ಯೇಯೊದ್ದೇಶಗಳ ಬಗ್ಗೆ ವಿವರಿಸಿದರು. ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಯವರು 2024-25 ನೆ ಸಾಲಿನ ಕ್ರಿಯಾಯೋಜನೆಯ ಬಗ್ಗೆ ತಿಳಿಸಿ ವಲಯವಾರು ವಿಭಜನೆ ಮಾಡಿ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.

ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಬಿಳಿನೆಲೆ ವಲಯದ ಮೇಲ್ವಿಚಾರಕ ಆನಂದ್ ವಂದಿಸಿದರು.ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ ರವರು ನಿರೂಪಿಸಿದರು.

Leave a Reply

error: Content is protected !!