ಕೊಕ್ಕಡ ಸೈಂಟ್ ಫ್ರಾನ್ಸಿಸ್ ಪ.ಪೂ. ಕಾಲೇಜುಗೆ ಶೇ.100 ಫಲಿತಾಂಶ

ಶೇರ್ ಮಾಡಿ

ಕೊಕ್ಕಡ: 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಕ್ಕಡ ಸೈಂಟ್ ಫ್ರಾನ್ಸಿಸ್ ಪದವಿ ಪೂರ್ವ ಕಾಲೇಜಿಗೆ 100% ಫಲಿತಾಂಶ ಲಭಿಸಿದೆ.

ವಿಜ್ಞಾನ ವಿಭಾಗದ ಪರೀಕ್ಷೆ ಬರೆದ 6 ವಿದ್ಯಾರ್ಥಿಗಳಲ್ಲಿ 2 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಮತ್ತು 4 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ವಾಣಿಜ್ಯ ವಿಭಾಗದ 6 ವಿದ್ಯಾರ್ಥಿಗಳಲ್ಲಿ 5 ಪ್ರಥಮ ಶ್ರೇಣಿಯಲ್ಲಿ 1 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ವಿಜ್ಞಾನ ವಿಭಾಗದ ಅನುಜ್ಞಾ 546, ಡೆಲ್ಸನ್ 519, ನೋಯೆಲ್ 460, ವಾಣಿಜ್ಯ ವಿಭಾಗದ ಜಿತಿನ್ 484, ಆಯಿಷಾ ಶಮಾ 479, ಸ್ನೇಹ ಚಾಕೊ 435 ಅಂಕಗಳನ್ನು ಪಡೆದಿದ್ದಾರೆ.

Leave a Reply

error: Content is protected !!