ಉದನೆ: ಕೋರ್ ಎಪಿಸ್ಕೊಪ ಫಾ.ಕುರಿಯಾಕೋಸ್ ಕಾವನಾಟ್ಟೆಲ್ ಗೆ ಸನ್ಮಾನ

ಶೇರ್ ಮಾಡಿ

ನೆಲ್ಯಾಡಿ :ರೆಂಜಿಲಾಡಿ ಸೆಂಟ್ ಮೇರಿಸ್ ಜಾಕೋಬೈಟ್ ಸೂನೋರೋ ದೇವಾಲಯದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಕೋರ್ ಎಪಿಸ್ಕೊಪ ಪದವಿಗೇರಿದ ಕುಟ್ರಪ್ಪಾಡಿಯ ಕಾವನಾಟ್ಟೇಲ್ ಕುಟುಂಬಕ್ಕೆ ಸೇರಿದ ವಂ.ಫಾ.ಕುರಿಯಾಕೋಸ್ ಕಾವನಾಟ್ಟೆಲ್ ಅವರನ್ನು ಉದನೆ ಸೀರೋ ಮಲಬಾರ್ ಫೋರೋನ ವತಿಯಿಂದ ರೆಂಜಿಲಾಡಿಯಲ್ಲಿ ಅಭಿನಂದಿಸಲಾಯಿತು.

ವಂದನಿಯ ಕುರಿಯಯಾಕೋಸ್ ಕಡಬದ ಕಾವನಾಟ್ಟೆಲ್ ಕುಟುಂಬಕ್ಕೆ ಸೇರಿದವರಾಗಿದ್ದು, ಸುಮಾರು ಇಪ್ಪತೈದು ವರ್ಷಗಳಿಂದ ಕಡಬ ಪ್ರದೇಶದಲ್ಲಿ ಧಾರ್ಮಿಕ ಸೇವೆಯಲ್ಲಿರುವ ವಂದನೀಯರು ಕೋರ್ ಎಪಿಸ್ಕೊಪ ಪದವಿ ಅವರ ಸೇವೆಗೆ ಸಮಾಜ ನೀಡಿದ ಗೌರವ ವಾಗಿದೆ ಎಂದು ಉದನೆ ಫೋರೋನ ಧರ್ಮಗುರು ವಂ.ಫಾ.ಸಿಬಿ ತೋಮಸ್ ಅಭಿನಂದನಾ ಸಂದೇಶದಲ್ಲಿ ತಿಳಿಸಿದರು.

ಧರ್ಮ ಗುರುಗಳಾದ ಫಾ.ಶಾಜಿ ಮಾತ್ಯು, ಫಾ.ಜೋಸ್ ಆಯಾಮ್ಕುಡಿ, ಫಾ.ಜೋಸ್ ಪೂವತ್ತಿಂಕಲ್, ಫಾ.ಶಿಬು ವರ್ಗೀಸ್, ಫಾ.ಪುದಿಯೇಡತ್ಫಾ ಡೊನೇಲ್, ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!