ರಸ್ತೆ ಮಧ್ಯೆ ವೇಗ ನಿಯಂತ್ರಣ ಉಬ್ಬುಗಳಿಗೆ ಬಣ್ಣ ಬಳಿದ ಅರಸಿನಮಕ್ಕಿ, ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕ

ಶೇರ್ ಮಾಡಿ

ಕೊಕ್ಕಡ, ರೆಖ್ಯ, ಶಿಶಿಲ, ಕಳೆಂಜ ಈ ರಸ್ತೆಗಳಲ್ಲಿ ಅನೇಕ ಕಡೆ ವೇಗ ನಿಯಂತ್ರಕ ಉಬ್ಬುಗಳಿದ್ದು ಈ ಬಗ್ಗೆ ಯಾವುದೇ ಸೂಚನಾ ಫಲಕಗಳು ಇಲ್ಲದೆ ಇರುವುದರಿಂದ ಅನೇಕ ದ್ವಿಚಕ್ರ ವಾಹನಗಳು ಅಪಘಾತ ಆಗುತ್ತಿದ್ದು, ಇದನ್ನು ಮನಗಂಡ ಅರಸಿನಮಕ್ಕಿ, ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸೇವಾ ಪ್ರತಿನಿಧಿ ಮತ್ತು ಘಟಕ ಪ್ರತಿನಿಧಿಯವರು ಶೌರ್ಯ ವಿಪತ್ತು ನಿರ್ವಹಣೆ ಘಟಕದ ಯೋಜನಾಧಿಕಾರಿ ಜೈವಂತ್ ಪಟ್ಕರ್ ನೇತೃತ್ವದಲ್ಲಿ, ಸ್ಥಳೀಯ ಜನಪ್ರತಿನಿಧಿ ನವೀನ್ ರೆಖ್ಯ ಮತ್ತು ಕರುಣಾಕರ್ ಶಿಶಿಲ ಅವರ ಸಹಕಾರದಿಂದ ವೇಗ ನಿಯಂತ್ರಣ ಉಬ್ಬುಗಳಿಗೆ ಬಣ್ಣ ಬಳಿದು ಅವುಗಳು ದೂರದಿಂದಲೇ ಸ್ಪಷ್ಟವಾಗಿ ಗೋಚರಿಸುವಂತೆ ಶೌರ್ಯ ವಿಪತ್ತು ನಿರ್ವಹಣಾ ತಂಡವು ಮಾಡಿರುತ್ತಾರೆ.

ಬಣ್ಣದ ವೆಚ್ಚವನ್ನು ಎಸ್ ಕೆ ಡಿ ಆರ್ ಡಿ ಪಿ ಸಂಸ್ಥೆಯ ನಿರ್ದೇಶಕ ಬಿ.ಜಯರಾಮ್ ನೆಲ್ಲಿತ್ತಾಯ ಮತ್ತು ಹತ್ಯಡ್ಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ನೀಡಿರುತ್ತಾರೆ.

Leave a Reply

error: Content is protected !!