ದ್ವಿತೀಯ ಪಿಯುಸಿ ಪರೀಕ್ಷೆ 1 ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ, ಮರುಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಆಹ್ವಾನ

ಶೇರ್ ಮಾಡಿ

ದ್ವಿತೀಯ ಪಿಯುಸಿ ಪರೀಕ್ಷೆ 1 ರ ಫಲಿತಾಂಶ ಪ್ರಕಟವಾಗಿದೆ. ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶ ನಿಮಗೆ ಸಮಾಧಾನಕರವಾಗಿಲ್ಲದಿದ್ದಲ್ಲಿ ಪರೀಕ್ಷೆ 2 ತೆಗೆದುಕೊಳ್ಳಬಹುದು ಹಾಗೂ ಉನ್ನತೀಕರಿಸಿಕೊಳ್ಳಬಹುದು. ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈಗ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್‌ ಪ್ರತಿ ಪಡೆಯಲು, ಮರುಎಣಿಕೆಗೆ ಅರ್ಜಿ ಹಾಕಲು ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಈ ಸಂಬಂಧ ವಿದ್ಯಾರ್ಥಿಗಳು ಈ ಯಾವುದೇ ಸೌಲಭ್ಯಕ್ಕಾಗಿ ಈಗ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿಗಳು ತಾವು ಉತ್ತರ ಪತ್ರಿಕೆಯ ಸ್ಕ್ಯಾನ್ಡ್‌ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ ವಿಷಯಗಳಿಗೆ ಮಾತ್ರ ಮರುಮೌಲ್ಯಮಾಪನ / ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುವ ವಿಷಯಗಳಿಗೆ ಮರುಎಣಿಕೆಗಾಗಿ ಅರ್ಜಿ ಸಲ್ಲಿಸುವ ಅವಶ್ಕಕತೆ ಇರುವುದಿಲ್ಲ. ಆನ್‌ಲೈನ್‌ ಹೊರತುಪಡಿಸಿ, ಮತ್ಯಾವುದೇ ಮಾರ್ಗದಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ. ಈ ಯಾವುದೇ ಸೌಲಭ್ಯಕ್ಕಾಗಿ ಆನ್‌ಲೈನ್‌ ಮೂಲಕವೇ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಅಥವಾ ಆಫ್‌ಲೈನ್‌ ಚಲನ್ (ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾ ಚಲನ್) ಮೂಲಕವು ಅರ್ಜಿ ಸಲ್ಲಿಸಬಹುದು.

ಯಾವ ಸೌಲಭ್ಯಕ್ಕಾಗಿ ಎಷ್ಟು ಶುಲ್ಕ?
ಸ್ಕ್ಯಾನ್ಡ್‌ ಪ್ರತಿಗಾಗಿ ಅರ್ಜಿ ಸಲ್ಲಿಸಲು ಪ್ರತಿ ವಿಷಯಕ್ಕೆ ರೂ.530.
ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಪ್ರತಿ ವಿಷಯಕ್ಕೆ ರೂ.1670.
ಅಂಕಗಳ ಮರುಎಣಿಕೆಗಾಗಿ ಯಾವುದೇ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸಲು ನಿಗದಿತ ದಿನಾಂಕಗಳು
ಸ್ಕ್ಯಾನ್ಡ್‌ ಪ್ರತಿಗಾಗಿ ಅರ್ಜಿ ಸಲ್ಲಿಸುವ ದಿನಾಂಕ : ಏಪ್ರಿಲ್ 10 ರಿಂದ 16, 2024 ರವರೆಗೆ.
ಸ್ಕ್ಯಾನ್ಡ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳಲು ಪ್ರಾರಂಭ ಹಾಗೂ ಕೊನೆಯ ದಿನಾಂಕ : ಏಪ್ರಿಲ್ 14 – 19, 2024 ರವರೆಗೆ.
ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಹಾಗೂ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು (ಸ್ಕ್ಯಾನ್ಡ್‌ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಅವಕಾಶ ಇರುತ್ತದೆ) : ಏಪ್ರಿಲ್ 15-20, 2024 ರವರೆಗೆ.

ಅರ್ಜಿ ಸಲ್ಲಿಸುವ ವಿಧಾನ

  • ವೆಬ್‌ಸೈಟ್‌ ವಿಳಾಸ https://kseab.karnataka.gov.in/english ಕ್ಕೆ ಭೇಟಿ ನೀಡಿ.
  • ತೆರೆದ ಮುಖಪುಟದಲ್ಲಿ ‘ಮತ್ತಷ್ಟು ಸುದ್ದಿಗಳು ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಹೊಸ ಪೇಜ್‌ ಪ್ರದರ್ಶಿತವಾಗುತ್ತದೆ. ‘Click here to apply online application for Scanned copy, Revaluation, Retotalling of II PUC Exam-1 March 2024’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಉತ್ತರ ಪತ್ರಿಕೆ, ಮರುಮೌಲ್ಯಮಾಪನ, ಮರುಎಣಿಕೆ ಯಾವುದೇ ಸೌಲಭ್ಯ ಬಯಸುವವರು ನಿಮ್ಮ ಪರೀಕ್ಷೆ-1 ರಿಜಿಸ್ಟರ್ ನಂಬರ್ ನಮೂದಿಸಬೇಕು.
  • ನಿಮ್ಮ ಡೀಟೇಲ್ಸ್‌ ಪ್ರದರ್ಶಿತವಾಗುತ್ತದೆ.
  • ನಿಮಗೆ ಉತ್ತರ ಪತ್ರಿಕೆ ಬೇಕಾದಲ್ಲಿ ಒಮ್ಮೆಯೇ ವಿಷಯಗಳನ್ನು ಆಯ್ಕೆ ಮಾಡಿ, ಪೋಷಕರ ಮೊಬೈಲ್ ನಂಬರ್, ಇ-ಮೇಲ್‌ ವಿಳಾಸ ನೀಡಿ ‘Submit’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಶುಲ್ಕದ ಚಲನ್‌ ಸಂಖ್ಯೆಯು ಆಟೋ ಜೆನೆರೇಟ್‌ ಆಗುತ್ತದೆ.
  • ‘Make Payment’ ಬಟನ್ ಕ್ಲಿಕ್ ಮಾಡಿ ಶುಲ್ಕ ಪಾವತಿಸಿ.

ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ವಿದ್ಯಾರ್ಥಿ ಮೊಬೈಲ್‌ ನಂಬರ್‌ಗೆ ಸಂದೇಶ ಕಳುಹಿಸಲಾಗುತ್ತದೆ. ಸದರಿ ನಂಬರ್ ಬಳಸಿಕೊಂಡು, ಮಂಡಲಿಯ ವೆಬ್‌ಸೈಟ್‌ನಲ್ಲಿ ಏಪ್ರಿಲ್ 14 ರಿಂದ 19 ರವರೆಗೆ ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ ತೆಗೆದುಕೊಂಡು, ಅವುಗಳಲ್ಲಿ ವ್ಯತ್ಯಾಸ ಕಂಡುಬಂದರೆ ಮಾತ್ರ ಮರುಮೌಲ್ಯಮಾಪನ ಅಥವಾ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಬಹುದು. ಉತ್ತರ ಪತ್ರಿಕೆ ಸ್ಕ್ಯಾನ್ಡ್‌ ಪ್ರತಿ ತೆಗೆದುಕೊಳ್ಳಲು ಅನುಸರಿಸಿದ ಕ್ರಮವನ್ನೇ ಈ ಸೌಲಭ್ಯಗಳಿಗೂ ಅನುಸರಿಸಬೇಕು.

Leave a Reply

error: Content is protected !!