ನೆಲ್ಯಾಡಿ ಗ್ರಾಮದ ಹೊಸಮನೆ-ಪರಾರಿಯಲ್ಲಿ ನಾಗಬ್ರಹ್ಮ, ಪೆರಿಯ ದೈವಂಗಳು ಹಾಗೂ ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಸಾನಿಧ್ಯ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವ ಗುರುವಾರ ಮತ್ತು ಶುಕ್ರವಾರ ನಡೆಯಿತು.
ಗುರುವಾರ ತಂತ್ರಿಗಳ ಆಗಮನ, ದೇವತಾ ಪ್ರಾರ್ಥನೆ, ಪುಣ್ಯಾಹ ಪಂಚಗವ್ಯ, ಶಿಲ್ಪಿವರಣ, ಆಚಾರ್ಯವರಣ, ಸಪ್ತಶುದ್ಧಿ, ಪ್ರಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ದಿಕ್ಪಾಲಕ ಬಲಿ. ರಾತ್ರಿ 9ಕ್ಕೆ ಆಧಿವಾಸ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಶುಕ್ರವಾರ ಮುಂಜಾನೆ ಗಣಪತಿ ಹೋಮ ಕಲಶ ಪೂಜೆ, ಅಣ್ಣಪ್ಪ ಪಂಜುರ್ಲಿ, ಪ್ರತಿಷ್ಠೆ, ಕಳಶಾಭಿಷೇಕ, ಪರ್ವ ಪೂಜೆಗಳು, ನಾಗತಂಬಿಲ. ಸಂಜೆ ಅಣ್ಣಪ್ಪ ಪಂಜುರ್ಲಿ ಕಲ್ಲುರ್ಟಿ, ಗುಳಿಗ ದೈವಗಳ ಭಂಡಾರ ಪೆರಿಯ ದೈವಗಳ ಸನ್ನಿಧಾನಕ್ಕೆ ಆಗಮನ, ಪೆರಿಯ ದೈವಗಳ ಭಂಡಾರ ಏರಿಸಿ ನೇಮೋತ್ಸವ ಕಾರ್ಯಕ್ರಮ ನಡೆಯಿತು.
ಭಂಡಾರದ ಮನೆ ಮುಖ್ಯಸ್ಥ ತುಕಾರಾಮರೈ ಹೊಸಮನೆ, ನೇಮೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಗೌರಿಮಜಲು, ಕಾರ್ಯದರ್ಶಿ ಶಿವಪ್ರಸಾದ್ ಬೀದಿಮಜಲು, ಕೋಶಾಧಿಕಾರಿ ರತ್ನಾಕರ ಬಂಟ್ರಿಯಾಲ್ ಪರಾರಿ, ಜೊತೆ ಕಾರ್ಯದರ್ಶಿ ಗಿರೀಶ್ ದರ್ಖಾಸ್, ಜಯಾನಂದ ಬಂಟ್ರಿಯಾಲ್ ಮತ್ತು ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.